ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಾಳದಿನದ ಮ್ಯಾಲೆ ಚಳಿಗಾಲ ಅಧಿವೇಶನ ನಡೆತಿದೆ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿ..!

ಹುಬ್ಬಳ್ಳಿ: ಬಾಳ ದಿನದ ಮ್ಯಾಲ ನಮ್ಮ ಬೆಳಗಾವಿ ಚಳಿಗಾಲ ಅಧಿವೇಶನ ಆಗಾಕತ್ತೈತಿ. ಜನಪ್ರತಿನಿಧಿಗಳೆ ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡ್ರಿ ಸ್ವಲ್ಪ. ಯಾಕೆಂದ್ರ ಎಷ್ಟು ವರ್ಷ ಆದರೂ ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿ ಹೆಸರಿನಲ್ಲಿ ಕನಸು ಕಾಣಾಕತೈತೇ ಹೋರತು ನನಸಾಗ್ವಲ್ದು.

ಹೌದು.. ಉತ್ತರ ಕರ್ನಾಟಕ ಭಾಗದ ಬೆಳಗಾವಿಯ ಸುವರ್ಣ ಸೌಧದಾಗ ಕುಮಾರಸ್ವಾಮಿ ಅವರು ಸಿಎಂ ಇದ್ದಾಗ ನಡೆದ ಅಧಿವೇಶನ ಈಗ ಈ ಭಾಗದ ನಾಯಕರಾದ ಬಸವರಾಜ ಬೊಮ್ಮಾಯಿಯವರು ಸಿಎಂ ಆದಮೇಲೆ ನಡ್ಯಾಕತೈತಿ. ಸಿಎಂ ಸಾಹೇಬರೇ ಈ ಸಾರಿ ನಮ್ಮವರೇ ಇದ್ದೀರಿ ಈ ಭಾಗದ ಬಗ್ಗೆ ಸ್ವಲ್ಪ ಧ್ವನಿ ಎತ್ತರಿ.

ಸುಮಾರು ನಾಲ್ಕು ದಶಕಗಳ ಹೋರಾಟ ಮಹದಾಯಿ, ಕೃಷಿ ಕಾಯಿದೆ ತಿದ್ದುಪಡಿ, ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ರಿ. ಅಲ್ಲದೇ ಇಲ್ಲಿಗೆ ಬಂದ ಬಹುತೇಕ ನಾಯಕರು ಮತ್ತ ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಉತ್ತರ ಕರ್ನಾಟಕದ ಬಗ್ಗೆ ಜಗ್ಗ ಮಾತಾಡ್ಯಾರ ಅದೆಷ್ಟರಮಟ್ಟಿಗೆ ಧ್ವನಿ ಅಧಿವೇಶನದಾಗ ಧ್ವನಿ ಎತ್ತುತ್ತಾರೋ ಕಾದುನೋಡಬೇಕ.

Edited By : Nagesh Gaonkar
Kshetra Samachara

Kshetra Samachara

13/12/2021 09:37 pm

Cinque Terre

50.39 K

Cinque Terre

3

ಸಂಬಂಧಿತ ಸುದ್ದಿ