ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕೋನರಡ್ಡಿ ಸೇರ್ಪಡೆಗೆ ಮುನ್ನವೇ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ

ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ

ನವಲಗುಂದ : ತೆನೆ ಹೊರೆ ಇಳಿಸಿ " ಕೈ '' ಹಿಡಿಯುವ ಉತ್ಸಾಹದಲ್ಲಿರುವ ಧಾರವಾಡ ಜಿಲ್ಲೆಯ ಏಕೈಕ ಜೆಡಿಎಸ್ ನಾಯಕ ಎನ್.ಎಚ್ ಕೋನರಡ್ಡಿ ಈಗ ಸ್ಥಳೀಯ ಕಾಂಗ್ರೆಸ್ ನಾಯಕರಿಂದ ಪ್ರತಿರೋಧ ಎದುರಿಸಬೇಕಾಗಿದೆ.

ಭಾನುವಾರ ಪಟ್ಟಣದಲ್ಲಿ ಜರುಗಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಕೋನರಡ್ಡಿ ಬೆಂಬಲಿಗರ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಕೆಂಡಾಮಂಡಲವಾಗಿದಂತೂ ಸತ್ಯ. ಕಾಂಗ್ರೆಸ್ ಸೇರ್ಪಡೆಯಾಗುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಕಾರ್ಯಕ್ರಮದಲ್ಲಿ ಕೋನರಡ್ಡಿ ಕೆಲವು ಅಭಿಮಾನಿಗಳು ಹಾಕಿದ ಶರತ್ತುಗಳು ನವಲಗುಂದ ಕಾಂಗ್ರೆಸ್ ಕಾರ್ಯರ್ಕತರನ್ನು ಕೆರಳಿಸಿದೆ.

ಒಂದು ವೇಳೆ ಕಾಂಗ್ರೆಸ್ ಸೇರಿದರೆ ಪಕ್ಷದ ನಾಯಕರು ನವಲಗುಂದ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೋನರಡ್ಡಿಗೆ ನೀಡಬೇಕು. ಇಷ್ಟೇ ಅಲ್ಲ ಮುಂಬರುವ ಜಿಲ್ಲಾ ಹಾಗೂ ತಾಲೂಕ ಪಂಚಾಯಿತಿ ಚುನಾವಣೆಯಲ್ಲಿ ಕೋನರಡ್ಡಿ ಬೆಂಬಲಿಗರಿಗೆ ಹೆಚ್ಚು ಕಾಂಗ್ರೆಸ್ ಟಿಕೆಟ್ ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗಳಲ್ಲಿಯೂ ಹೆಚ್ಚಿನ ಪ್ರಾದಾನ್ಯತೆ ನೀಡಬೇಕೆಂಬ ಶರತ್ತುಗಳು ವಿವಾದಕ್ಕೆ ಕಾರಣವಾಗಿದೆ.

ಮುಂಬರುವ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ನವಲಗುಂದ ಕ್ಷೇತ್ರದಿಂದ ಸ್ಪರ್ಧಿಸಲು ಜಿಲ್ಲಾ ಗ್ರಾಮೀಣ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಉತ್ಸುಕರಾಗಿ ಗ್ರೌಂಡ್ ವರ್ಕ್ ಆರಂಭಿಸಿದ್ದಾರೆ. ಹಳೆ ಹುಲಿ ಕೆ ಎನ್ ಗಡ್ಡಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಕೋನರಡ್ಡಿ ಪ್ರವೇಶದಿಂದ ತಮಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇರುವುದರಿಂದ ಇವರೆಲ್ಲರೂ ಕಾಂಗ್ರೆಸ್ ನಾಯಕರ ಮುಂದೆ ಅಸಮಾಧನ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಇದು ಮಾತ್ರವಲ್ಲ ಸಮಾಜಿಕ ಜಾಲ ತಾಣಗಳಲ್ಲಿ ಅಸೂಟಿ ಪರ ಪ್ರಚಾರವೂ ಆರಂಭವಾಗಿದೆ.

ವಿನೋದ ಅಸೂಟಿ ಅವರ ಅಭಿಮಾನಿಗಳಿಂದಲೂ ಸಹ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಅಸೂಟಿ ಅಭಿಮಾನಿಗಳು ಈ ಬಾರಿ ಅಸೂಟಿ ಅವರಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಹೇಳಲಾರಂಭಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕೋನರಡ್ಡಿ ಕಾಂಗ್ರೆಸ್ ಪ್ರವೇಶದಿಂದ ಪಕ್ಷಕ್ಕೆ ಎಷ್ಟು ನೆರವಾಗುತ್ತೊ ಗೊತ್ತಿಲ್ಲ. ಒಂದು ವೇಳೆ ಕೋನರಡ್ಡಿಗೆ ಟಿಕೆಟ್ ನೀಡಲು ಮುಂದಾದರೆ ಚುನಾವಣೆ ಸಂದರ್ಭದಲ್ಲಿ ಅಸಮಾಧಾನ ಭುಗಿಲೇಳುವುದಂತೂ ಖಚಿತ ಎಂಬ ಮಾತು ಮೂಲ ಕಾಂಗ್ರೆಸ್ಸರಿಂದ ಕೇಳಿ ಬರುತ್ತಿದೆ.

Edited By :
Kshetra Samachara

Kshetra Samachara

13/12/2021 05:14 pm

Cinque Terre

16.53 K

Cinque Terre

4

ಸಂಬಂಧಿತ ಸುದ್ದಿ