ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಕಾಯ್ದೆಗಳು ವಾಪಸ್: ಧಾರವಾಡದಲ್ಲಿ ವಿಜಯೋತ್ಸವ

ಧಾರವಾಡ: ತಿದ್ದುಪಡಿಯ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿ ಸೇರಿ ದೇಶದಾದ್ಯಂತ ರೈತರು ನಡೆಸಿದ ಪ್ರತಿಭಟನೆಯಿಂದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಸಂಯುಕ್ತ ಕಿಸಾನ್ ಮೋರ್ಚಾ ಇಟ್ಟಿದ್ದ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಮೋದಿ ಸರ್ಕಾರ ಲಿಖಿತ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ನಾಲ್ಕು ಗಡಿಗಳಲ್ಲಿ ಕಳೆದ 380 ದಿನಗಳಿಂದ ನಡೆಯುತ್ತಿದ್ದ ರೈತ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಧಾರವಾಡದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಎಲ್ಲ ಸಂಘಟನೆಗಳ ರೈತರು ವಿಜಯೋತ್ಸವ ಆಚರಿಸಿದರು.

ಧಾರವಾಡದ ಆಲೂರು ವೆಂಕಟರಾವ್ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ರೈತರು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲಿ ಸಿಎಫ್‌ಡಿಯ ಅಖಿಲ ಭಾರತ ಅಧ್ಯಕ್ಷ ಎಸ್.ಆರ್.ಹಿರೇಮಠ ಮಾತನಾಡಿ, ಭಾರತದ ಪ್ರಜಾಸತ್ತಾತ್ಮಕ ಜನಾಂದೋನದ ಇತಿಹಾಸದಲ್ಲಿ ಇದೊಂದು ಅದ್ಭುತ ಕ್ಷಣ. ಕೇಂದ್ರ ಬಿಜೆಪಿ ಸರ್ಕಾರದ ಎಲ್ಲಾ ರೀತಿಯ ದಮನ ಮತ್ತು ದಬ್ಬಾಳಿಕೆಯನ್ನು ಎದುರಿಸಿದ ರೈತರು ಏಳುನೂರು ಜೀವಗಳನ್ನು ಬಲಿಕೊಟ್ಟು ದೇಶ-ವಿದೇಶಗಳ ಕಾರ್ಪೋರೇಟ್ ಕಂಪೆನಿಗಳ ಮತ್ತು ಅವರ ಬಾಲ ಬಡುಕರು ಮಂಡಿಯೂರುವಂತೆ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿರುವ ರೈತರ ಬಹುತೇಕ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಕೇಂದ್ರ ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡು ಜಾರಿಗೊಳಿಸುವುದಾಗಿ ಲಿಖಿತ ಭರವಸೆಯನ್ನು ನೀಡಿದೆ. ಇದೊಂದು ಮಹಾ ವಿಜಯವಾಗಿದೆ. ಇದು ಜನರಲ್ಲಿ ವಿಶ್ವಾಸ ಮತ್ತು ಬದ್ಧತೆಯನ್ನು ಮೂಡಿಸಿದೆ. ಜನರು ಒಗ್ಗಟ್ಟಾಗಿದ್ದರೆ ಮತ್ತು ಅವಿರತವಾದ, ಬದ್ಧತೆಯುಳ್ಳ, ಸಾವಿಗೆ ಅಂಜದ ಹೋರಾಟವನ್ನು ನಡೆಸಿದರೆ ಅನಾಗರಿಕ, ಫ್ಯಾಸಿಸ್ಟ್ ಆಡಳಿತವನ್ನು ಸೋಲಿಸಬಹುದು ಎಂದು ಸಾಭೀತುಪಡಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾಗಪ್ಪ ಉಂಡಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡೆ, ಕರ್ನಾಟಕ ರಾಜ್ಯ ರೃತ ಸಂಘದ ರವಿರಾಜ ಕಾಂಬಳೆ, ಸಿಟಿಜನ್ ಫಾರ್ ಡೆಮಾಕ್ರಸಿಯ ರಾಜ್ಯ ಕಾರ್ಯದರ್ಶಿ ಡಾ. ವೆಂಕನಗೌಡ ಪಾಟೀಲ, ಲಕ್ಷ್ಮಣ ಬಕ್ಕಾಯಿ, ಶರಣು ಗೋನವಾರ, ದೀಪಾ ವಿ., ಎಐಯುಟಿಯುಸಿ ಜಿಲಾ ಅಧ್ಯಕ್ಷ ಗಂಗಾಧರ್ ಬಡಿಗೇರ ಈ ಸಂದರ್ಭದಲ್ಲಿದ್ದರು.

Edited By : Nagesh Gaonkar
Kshetra Samachara

Kshetra Samachara

11/12/2021 08:05 pm

Cinque Terre

35.77 K

Cinque Terre

13

ಸಂಬಂಧಿತ ಸುದ್ದಿ