ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಕ್ಷದಿಂದ ಯಾವುದೇ ಬಂಡಾಯ ಅಭ್ಯರ್ಥಿಗಳು ಇಲ್ಲ! ನಾನೇ ಅಧಿಕೃತ ಬಿಜೆಪಿ ಅಭ್ಯರ್ಥಿ- ಪ್ರದೀಪ್ ಶೆಟ್ಟರ

ಹುಬ್ಬಳ್ಳಿ: ಸ್ಥಳೀಯ ಸಂಸ್ಥೆಗಳಿಗೆ ಜರುಗುವ ವಿಧಾನ ಪರಿಷತ್ ಚುನಾವಣೆಯಲ್ಲಿಂದು ಶೇ ೮೦ ರಷ್ಟು ಮತದಾನವಾಗಿದ್ದು, ಸಾಕಷ್ಟು ಮತದಾರರು ನನಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ತಿಳಿಸಿದರು.

ಚುನಾವಣೆ ಅಂಗವಾಗಿ ತಮ್ಮ ಮತ ಚಲಾಯಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು, ಮೂರು ಜಿಲ್ಲೆಗಳಿಂದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.

೫೦೦೦ ಮೊದಲ ಪ್ರಾಶಸ್ತ್ಯ ಮತಗಳು ನನಗೆ ದೊರೆಯಲಿದೆ ಎಂದರು. ಪಕ್ಷದಿಂದ ಯಾವುದೇ ಬಂಡಾಯ ಅಭ್ಯರ್ಥಿಗಳು ಇಲ್ಲ. ನಾನೇ ಅಧಿಕೃತ ಬಿಜೆಪಿ ಅಭ್ಯರ್ಥಿ. ಹಾಗಾಗಿ ಫಲಿತಾಂಶದಲ್ಲಿ ಯಾವುದೆ ಪರಿಣಾಮ ಬೀರುವುದಿಲ್ಲ. ಈ ಚುನಾವಣೆಯಲ್ಲಿ ಯಾವುದೇ ಜಾತಿಯ ಮೇಲೆ ಚುನಾವಣೆ ನಡೆಯುವುದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ೪ ಬಾರಿ ಆರಿಸಿ ಬಂದಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆ ಯಾವುದೇ ಜಾತಿ ಆಧಾರದ ಮೇಲೆ ನಡೆಯುವುದಿಲ್ಲ ಎಂದು ಪ್ರದೀಪ್ ಶೆಟ್ಟರ್ ತಿಳಿಸಿದರು.

Edited By : Shivu K
Kshetra Samachara

Kshetra Samachara

10/12/2021 03:17 pm

Cinque Terre

15.45 K

Cinque Terre

2

ಸಂಬಂಧಿತ ಸುದ್ದಿ