ಧಾರವಾಡ: ಸಿದ್ದರಾಮಯ್ಯ ಸಿಎಂ ಇದ್ದಾಗ ಮಹದಾಯಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಲಾಗಿತ್ತು. ಈಗ ಮತ್ತೆ ಹೋರಾಟಗಾರರಿಗೆ ಸಮನ್ಸ್ ಹೇಗೆ ಬಂದವೋ ಗೊತ್ತಾಗುತ್ತಿಲ್ಲ. ಹೋರಾಟಗಾರರ ಮೇಲಿರುವ ಈ ಕೇಸ್‌ಗಳನ್ನು ರಿ ಓಪನ್ ಮಾಡಬೇಡಿ ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಇದ್ದಾಗ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದು ಆದೇಶ ಕೂಡ ಹೊರ ಬಂದಿತ್ತು. ಈಗ ಮತ್ತೆ 18 ಜನರ ಮೇಲೆ ಸಮನ್ಸ್ ಜಾರಿಯಾಗಿದೆ. ಯಾವುದೇ ಸರ್ಕಾರ ಇರಲಿ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ರಿ ಓಪನ್ ಮಾಡಬಾರದು ಎಂದಿದ್ದಾರೆ.
ಸದ್ಯದ ಸಿಎಂ ಬೊಮ್ಮಾಯಿ ಕೂಡ ಮಹದಾಯಿ ಸಲುವಾಗಿ ಹೋರಾಟ ಮಾಡಿದ್ದಾರೆ. ಇವತ್ತು ಹೋರಾಟಗಾರರಿಗೆ ಬಂದಿರುವ ಸಮನ್ಸ್ ಬಗ್ಗೆ ಸಿಎಂ ಮಾಹಿತಿ ಪಡೆದುಕೊಳ್ಳಬೇಕು. ತಮ್ಮ ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ರೈತರ ಮೇಲಿರುವ ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಈ ಹಿಂದೆ 244 ಜನ ಹೋರಾಟಗಾರರ ಮೇಲಿದ್ದ ಕೇಸ್‌ಗಳನ್ನು ವಾಪಸ್ ಪಡೆಯಲಾಗಿದೆ. ಪೊಲೀಸರಿಗೆ ಕೇಸ್ ರಿ ಓಪನ್ ಮಾಡಲು ಅಧಿಕಾರವಿರುತ್ತದೆ ಈ ರೀತಿ ರಿ ಓಪನ್ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋನರಡ್ಡಿ ಆಗ್ರಹಿಸಿದರು.
Kshetra Samachara
06/12/2021 02:48 pm