ಕುಂದಗೋಳ : ಪೊಲೀಸರು ಎಂಜಲು ತಿನ್ನುವಂತಹ ನಾಯಿಗಳಾದ್ರೇ ಗೃಹ ಸಚಿವರು ಏನು ತಿನ್ನಬಹುದು ? ಎಂದು ಎಐಸಿಸಿ ಕಾರ್ಯಾಧ್ಯಕ್ಷ ಬಿ.ಕೆ.ಹರಿಪ್ರದಾಸ್ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಟಾಂಗ್ ಕೊಟ್ಟರು.
ಕುಂದಗೋಳ ಪಟ್ಟಣದಲ್ಲಿಂದು ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಅನ್ನ ತಿನ್ನುವವರು ಯಾರು ಈ ತರಹ ಮಾತನಾಡುವುದಿಲ್ಲ, ರಾಷ್ಟ್ರದ, ರಾಜ್ಯದ ರಕ್ಷಣೆಗೆ ನಿಂತವರು ದಿನದ 24 ಗಂಟೆ ಕೆಲಸ ಮಾಡುವರು ಎಲ್ಲೋ ಕೆಲಸ ಮಾಡುವಾಗ ತಪ್ಪಾಗಿ ರಬಹುದು. ಆದರೆ ಎಂಜಲು ತಿಂತಾರೆ ಮತ್ತೊಂದು ತಿಂತಾರೆ ಎಂದು ಹೇಳುವವರು ಅನ್ನ ತಿನ್ನುವವರು ಯಾರು ಈ ರೀತಿ ಹೇಳಿಕೆ ನೀಡುವುದಿಲ್ಲ ಎಂದು ಹರಿಹಾಯ್ದರು.
ಹಾವೇರಿ,ಗದಗ,ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಆಯ್ಕೆಯಾಗುವ ಚುನಾವಣೆಗೆ ಸಲೀಂ ಅಹ್ಮದ್ ಅವರು ಪರವಾಗಿ ಪ್ರಚಾರ ಮಾಡಲು ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ, ಆದಷ್ಟೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡಿದ್ದೇವೆ. ಅವರ ಉತ್ಸಾಹ ನೋಡಿದ್ರೆ ಈ ಬಾರಿ ಬಿಜೆಪಿಗೆ ಸೋಲು ಖಚಿತ ಎಂಬುದು ಕಾಣಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಸ್ವತಂತ್ರ ಅಭ್ಯರ್ಥಿ ನಿಂತಿರುವುದರಿಂದ ನಮಗೆ ಯಾವುದೇ ರೀತಿ ಹಿನ್ನಡೆಯಾಗುವದಿಲ್ಲ. ಬದಲಾಗಿ ಬಿಜೆಪಿಗೆ ಹಿನ್ನಡೆ ಆಗಬಹುದು. ಸ್ವತಂತ್ರ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಪ್ತರಾಗಿದ್ದು ಅವರನ್ನು ಏಕೆ ನಿಲ್ಲಿಸಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಈ ಬಾರಿ ಸಲೀಂ ಅಹ್ಮದ್ ಬಹು ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
Kshetra Samachara
03/12/2021 05:39 pm