ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಪ ಚುನಾವಣೆ: ಅಂತಿಮವಾಗಿ 10 ಅಭ್ಯರ್ಥಿಗಳು ಕಣದಲ್ಲಿ

ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿಗೆ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಉಳಿದಿದ್ದ 11 ಉಮೇದುವಾರರ ಪೈಕಿ ಒಬ್ಬ ಅಭ್ಯರ್ಥಿ ಇಂದು ತನ್ನ ನಾಮಪತ್ರ ಹಿಂಪಡೆದುಕೊಂಡರು. ಅಂತಿಮವಾಗಿ ಕಣದಲ್ಲಿ 10 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಮಪತ್ರ ಪಡೆಯಲು ಕೊನೆಯ ದಿನವಾದ ಇಂದು ಉಮೇದುವಾರಿಕೆ ಸಲ್ಲಿಸಿದ್ದ ಮಹೇಶ ಬಸೆಟ್ಟೆಪ್ಪ ಹೊಗೆಸೊಪ್ಪಿನ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

ಅಂತಿಮವಾಗಿ ಚುನಾವಣಾ ಕಣದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರದೀಪ ಶಿವಪ್ಪ ಶೆಟ್ಟರ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಸಲೀಂ ಅಹ್ಮದ್, ಜನತಾ ಪಾರ್ಟಿಯ ತಳವಾರ ಶಿವಕುಮಾರ ಮಹಾದೇವಪ್ಪ ಹಾಗೂ ಫಕ್ಕೀರಡ್ಡಿ ವೀರಪ್ಪ ಅತ್ತಿಗೇರಿ ಮತ್ತು ಪಕ್ಷೇತರರಾದ ಈರಪ್ಪ ಬಸನಗೌಡ ಗುಬ್ಬೇರ, ಬಸವರಾಜ ಶಂಕ್ರಪ್ಪ ಕೊಟಗಿ, ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ, ಮಹೇಶ ಗಣೇಶಭಟ್ಟ ಜೋಶಿ, ಮಂಜುನಾಥ ಗಣೇಶಪ್ಪ ಅಡ್ಮನಿ ಹಾಗೂ ವಿರುಪಾಕ್ಷಗೌಡ ಗೌಡಪ್ಪಗೌಡ ಪಾಟೀಲ ಉಮೇದುವಾರರಾಗಿ ಉಳಿದಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

26/11/2021 10:28 pm

Cinque Terre

47.33 K

Cinque Terre

1

ಸಂಬಂಧಿತ ಸುದ್ದಿ