ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕನ್ನಡ ಕಟ್ಟುವ ಕೆಲಸಕ್ಕೆ ರಾಜಕೀಯ ಸ್ಪರ್ಶ ಬೇಡ

ಧಾರವಾಡ: ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧಾರವಾಡದ ಪ್ರತಿಷ್ಟಿತ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣಾ ಕಣ ಇದೀಗ ರಂಗು ಪಡೆದುಕೊಂಡಿದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರಾದಿಯಾಗಿ ಅನೇಕರು ಕಾರ್ಯಕಾರಿ ಮಂಡಳಿಗೆ ಸ್ಪರ್ಧೆ ನಡೆಸಿದ್ದಾರೆ.

ಕನ್ನಡದ ಕಟ್ಟಾಳು ದಿವಂಗತ ಡಾ.ಪಾಟೀಲ ಪುಟ್ಟಪ್ಪನವರ ನಂತರ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ರಾಜಕೀಯ ಸ್ಪರ್ಶ ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

2018ರಲ್ಲಿ ಡಾ.ಪಾಟೀಲ ಪುಟ್ಟಪ್ಪನವರ ವಿರುದ್ಧವೇ ಸ್ಪರ್ಧೆ ನಡೆಸಿ ಕೇವಲ 400 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಸಯ್ಯ ಶಿವಯ್ಯ ಶಿರೋಳ ಅವರು ಇದೀಗ ಮತ್ತೆ ಚುನಾವಣಾ ಕಣಕ್ಕಿಳಿದಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರಿಗೆ ಠಕ್ಕರ್ ನೀಡಲು ಮುಂದಾಗಿದ್ದಾರೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ಆಗಬೇಕಾದ ಕೆಲಸಗಳು ಸಾಕಷ್ಟಿವೆ. ಸಂಘವನ್ನು ರಾಜಕೀಕರಣಗೊಳಿಸಿದರೆ, ಅದರ ಮೌಲ್ಯ ಹಾಳಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಬಸಯ್ಯ ಅವರು, ಈಗಾಗಲೇ ಅನೇಕ ಕವಿ, ಸಾಹಿತಿಗಳಿಗೆ ಪತ್ರದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

24/11/2021 10:46 pm

Cinque Terre

67.73 K

Cinque Terre

0

ಸಂಬಂಧಿತ ಸುದ್ದಿ