ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪಕ್ಷದ ವಿರೋಧಿ ಚಟುವಟಿಕೆ ಮೂವರು ಬಿಜೆಪಿ ಸದಸ್ಯರ ಉಚ್ಚಾಟನೆ

ಕುಂದಗೋಳ : ಬಿಜೆಪಿ ಪಕ್ಷ ಅತಿ ಶಿಸ್ತಿನ ಪಕ್ಷ ಈ ಪಕ್ಷದ ಶಿಸ್ತನ್ನು ವಿಚಾರಿಸಿದೇ ನವೆಂಬರ್ 6 ರಂದು ನಡೆದ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದ ಮೂವರು ಬಿಜೆಪಿ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಪೃಥ್ವಿರಾಜ ಕಾಳೆ ಹೇಳಿದರು.

ಅವರು ಕುಂದಗೋಳ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ ಮಲ್ಲಿಕಾರ್ಜುನ ಕಿರೇಸೂರ, ನೀಲಮ್ಮ ಕುಂದಗೋಳ, ಸುನೀತಾ ಪಾಟೀಲ್ ಮೂವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ತಾಲೂಕು ಅಧ್ಯಕ್ಷ ರವಿಗೌಡ ಪಾಟೀಲ್ ಆದೇಶ ಪಕ್ಷದ ನಿಯಮದಂತೆ ಉಚ್ಚಾಟನೆ ಮಾಡಿದ್ದೇವೆ ಎಂದರು.

ಇನ್ನೂ ಕೇಂದ್ರ ಸಚಿವರು ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡುವ ಕಿರೇಸೂರ ಅವರಿಗೆ ಕುಂದಗೋಳದಲ್ಲಿ ಕೇಂದ್ರ ಸಚಿವರ ಅನುದಾನದಲ್ಲಿ ಆದ ಕಾಮಗಾರಿ ವಿವಿರ ನೀಡಿದ ಅವರು, ಅಧಿಕಾರದ ಆಸೆಗಾಗಿ ಈ ನೀವೂ ಬೇರೆ ಮಾರ್ಗ ಹಿಡಿದಿದ್ದೀರಿ, ನೀವೂ ಸದಸ್ಯತ್ವ ಉಲ್ಲಂಘನೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಿಲು ಏರಿದರು ನಾವು ಉತ್ತರ ನೀಡಲು ಸಿದ್ಧರಿದ್ದೇವೆ ಎಂದರು.

Edited By : Manjunath H D
Kshetra Samachara

Kshetra Samachara

24/11/2021 03:31 pm

Cinque Terre

19.16 K

Cinque Terre

0

ಸಂಬಂಧಿತ ಸುದ್ದಿ