ಹುಬ್ಬಳ್ಳಿ: ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಧಾರ ರಹಿತ ಸುಳ್ಳಿನ ಪ್ರಚಾರ ಮಾಡುತ್ತಿದೆ. ಅಲ್ಲದೇ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿಯು ಹ್ಯಾರಿಸ್ ಪುತ್ರ, ರುದ್ರಪ್ಪ ಲಮಾಣಿ ಪುತ್ರನ ಹೆಸರು ಹೇಳಿದ್ದಾನೆ. ಕಾಂಗ್ರೆಸ್ ನವರು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ದಂಧೆ ಬಗ್ಗೆ ಸರ್ಕಾರಿಂದ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದರು.
ಇದೇ ರೀತಿ ಬೇಜವಬ್ದಾರಿ ಹೇಳಿಕೆಗಳನ್ನು ಕಾಂಗ್ರೆಸ್ ನವರು ನೀಡಿದರೇ ಮುಂದಿನ ದಿನಗಳಲ್ಲಿ ಪೊಲೀಸ್ ದೂರು ನೀಡಬೇಕಾಗುತ್ತದೆ. ಕಾಂಗ್ರೆಸ್ ದಲಿತರ ಬಗ್ಗೆ ಯಾವ ರೀತಿ ನಡೆಸಿಕೊಂಡಿದೆ ಎನ್ನುವುದು ಗೊತ್ತಿದೆ. ನಿಮ್ಮದೇ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗ ಸಿದ್ದರಾಮಯ್ಯ ಏನ್ ಮಾಡಿದ್ರು..? ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಕಾಂಗ್ರೆಸ್ ಅಂದರೆ ಹಗರಣಗಳ ಪಾರ್ಟಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಹಾನಗಲ್ ಚುನಾವಣೆ ಕುರಿತು ಮಾತನಾಡಿದ ಅವರು, ಹಾನಗಲ್ ಸೋಲು ಯಾರೊ ಒಬ್ಬರ ಮೇಲೆ ವೈಯಕ್ತಿಕವಾಗಿ ಹಾಕುವುದಲ್ಲ. ಈಗಾಗಲೇ ಸೋಲಿನ ಬಗ್ಗೆ ಅವಲೋಕನ ಆಗಿದೆ ಎಂದರು.
Kshetra Samachara
12/11/2021 04:58 pm