ಕುಂದಗೋಳ : ಶನಿವಾರ ನಡೆದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಗೆಲುವಿನ ಉತ್ಸಾಹದಲ್ಲಿ ಕೇಂದ್ರ ಸಚಿವರು ನಮ್ಮ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯನ್ನು ಬೆದರಿಸಿ ಕರೆದುಕೊಂಡು ಹೋಗಿದ್ದೇವೆಂದು ಗಂಭೀರ ಆರೋಪ ಮಾಡಿದ್ದಾರೆ.
ಅವರಿಗೆ ನೇರ ಸವಾಲು ಹಾಕುತ್ತಿದ್ದೇವೆ ನಿಮಗೆ ತಾಕತ್ತಿದ್ದರೆ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿದಾನಕ್ಕೆ ನೀವೂಗಳು ಪಕ್ಷೇತರ ಅಭ್ಯರ್ಥಿ ಸಮೇತ ಬನ್ನಿ ಯಾರು ? ತಪ್ಪು ಮಾಡಿದ್ದಾರೆ ? ಎಂಬುವುದನ್ನು ನಿರೂಪಿಸುತ್ತೇವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರ ಹೇಳಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಪಕ್ಷೇತರ ಅಭ್ಯರ್ಥಿಯ ನಮ್ಮ ಜೊತೆ ಕಾಂಗ್ರೆಸ್ ಸದಸ್ಯರನ್ನು ಸೇರಿ ಒಬ್ಬ ಪಕ್ಷೇತರ ಸದಸ್ಯರ ಜೊತೆಯಲ್ಲಿ ನಮ್ಮ ಮೂವರನ್ನು ಅವರೇ ತಮ್ಮ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಚುನಾವಣೆಯಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಅಂತ ಸ್ವತಃ ಪಕ್ಷೇತರ ಅಭ್ಯರ್ಥಿ ಧರ್ಮಸ್ಥಳದಲ್ಲಿ ಅವರೇ ಪ್ರಮಾಣ ಮಾಡಿದ್ದಾರೆ.
ಬಿಜೆಪಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಪಕ್ಷೇತರ ಅಭ್ಯರ್ಥಿ ನಮಗೆ ಆಣೆ ಮಾಡಿದ್ದಾರೆ, ಧರ್ಮಸ್ಥಳದ ದೇವಸ್ಥಾನದ ಸನ್ನಿಧಾನದಲ್ಲಿ ನಾವು ಬೆದರಿಸಿ ಕರೆದುಕೊಂಡು ಹೋಗುವ ಜಾಯಮಾನ ನಮ್ಮದಲ್ಲ. ಕೇಂದ್ರ ಸಚಿವರು ಮೊದಲು ಏನಾಗಿದೆ ? ಎಂಬುವುದನ್ನು ಮರೆಮಾಚು ಮಾಡಿ, ಮತದಾರರ ಮುಂದೆ ತಮ್ಮ ವರ್ಚಸ್ಸು ಹೆಚ್ಚಿಸಲು ಸುಳ್ಳು ಆರೋಪ ಮಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಇನ್ನೋರ್ವ ಪಟ್ಟಣ ಪಂಚಾಯಿತಿ ಸದಸ್ಯೆ ಸುನೀತಾ ಪಾಟೀಲ್ ನನ್ನ ಮಗಳ ಕೈಯಲ್ಲಿ ವಿಪ್ ಕೊಟ್ಟ ನಿಂತಿ ಸರಿಯಲ್ಲ ಎಂದರು, ಸದಸ್ಯೆ ನೀಲಮ್ಮ ಕುಂದಗೋಳ ಮಾತನಾಡಿ ನನಗೆ ಬಿಜೆಪಿ ಸದಸ್ಯರಿಂದ ಜೀವ ಬೆದರಿಕೆ ಕರೆ ಬರುತ್ತಿವೆ ನಾನು ಕಾನೂನು ಮೋರೆ ಹೋಗುತ್ತೇನೆ ಎಂದರು.
Kshetra Samachara
07/11/2021 09:38 pm