ಕುಂದಗೋಳ : ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಬಹು ಕುತೂಹಲದ ಚುನಾವಣೆಯಲ್ಲಿ ಕೊನೆಗೂ ಬಸವಳಿದು ಗೆದ್ದ ಬಿಜೆಪಿಯೇ ಅಧಿಕಾರದ ಗದ್ದುಗೆ ಹಿಡಿದಿದೆ.
ಹೌದು ! ಬಿಜೆಪಿಯ 12 ಸದಸ್ಯರ ಪೈಕಿ 3 ಜನ ಪಕ್ಷದಿಂದ ಜಾರಿಯಾದ ವಿಪ್ ಉಲ್ಲಂಘಿಸಿ ಬೇರೆ ಪಕ್ಷ ಸೇರಿ, ಅಧ್ಯಕ್ಷ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ್ದರು, ಬಿಜೆಪಿ ಪರ ಪ್ರಕಾಶ್ ಕೋಕಾಟೆ, ಕಾಂಗ್ರೆಸ್ ಪರ ಸುನೀತಾ ಪಾಟೀಲ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದವರೆಗೂ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನಿರ್ಣಾಯಕ ಮತದ ಮೂಲಕ ಬಿಜೆಪಿ 11 ಮತಗಳಿಂದ ವಿಜಯದ ಪತಾಕೆ ಹಾರಿಸಿತು.
ಚುನಾವಣೆಯಲ್ಲಿ ಬಿಜೆಪಿ 9 ಸದಸ್ಯರು ಪಕ್ಷೇತರರ ಒಬ್ಬರ ಜೊತೆ ಕೇಂದ್ರ ಸಚಿವರ ಒಂದು ಮತ ಸೇರಿ 11 ಮತ ಪಡೆದರೇ, ಕಾಂಗ್ರೆಸ್ ಪಕ್ಷವೂ ಪಕ್ಷದ 5 ಸದಸ್ಯರು ಪಕ್ಷೇತರರು ಒಬ್ಬರ ಮತದ ಜೊತೆ ಬಿಜೆಪಿ ಪಕ್ಸದಿಂದ ವಿಪ್ ಪಡೆದ ಮೂವರ ಮತ ಹಾಗೂ ಸ್ಥಳೀಯ ಶಾಸಕರ ಒಂದು ಮತ ಸೇರಿ 10 ಮತಗಳನ್ನು ಪಡೆದು ಸೋಲು ಕಂಡರೂ ಪ್ರತಿಷ್ಠೆಯ ಪೈಪೋಟಿ ನೀಡಿತು.
ಒಟ್ಟಾರೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪ್ರಕಾಶ್ ಕೋಕಾಟೆ, ಕಾಂಗ್ರೆಸ್ ಸುನೀತಾ ಪಾಟೀಲ್ ಸ್ಪರ್ಧೆಯಲ್ಲಿ ಬಿಜೆಪಿಯ ಪ್ರಕಾಶ್ ಕೋಕಾಟೆ 11 ಮತಗಳಿಂದ ಗೆಲುವು ಕಂಡ್ರೆ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಣುಮಂತಪ್ಪ ರಣತೂರ, ಕಾಂಗ್ರೆಸ್'ನ ಹಣುಮವ್ವ ಕೋರಿ ಸ್ಪರ್ಧೆ ನಡುವೆ ಬಿಜೆಪಿಯ ಹಣುಮಂತಪ್ಪ ರಣತೂರ 11 ಮತಗಳಿಂದ ಗೆಲುವು ಕಂಡರು.
ಪಟ್ಟಣ ಪಂಚಾಯಿತಿ ಅಧಿಕಾರದ ಗದ್ದುಗೆ ಹಿಡಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
Kshetra Samachara
06/11/2021 04:58 pm