ಹುಬ್ಬಳ್ಳಿ: ಮುಂಬರಲಿರುವ ದೀಪಾವಳಿ ಹಬ್ಬವನ್ನು ಹಲಾಲ್ ಮುಕ್ತ ದೀಪಾವಳಿ ಆಚರಣೆ ಮಾಡಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಕರೆ ನೀಡಿದರು.
ನಗರದಲ್ಲಿಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಶ್ರೀರಾಮ ಸೇನೆ ಸಹಯೋಗದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಪರಿಶೀಲನೆ ಮಾಡಲು ಸರ್ಕಾರದ ಎಫ್ ಎಸ್ಎಸ್ಎಐ ಸಂಸ್ಥೆ ಇದ್ದರು, ಸಹಿತ ಹಲಾಲ್ ಇಂಡಿಯಾ, ಜಮೀಯತ್ ಉಮೇಮಾ-ಎ-ಹಿಂದ್ ನಂತರ ಇಸ್ಲಾಮಿಕ್ ಸಂಸ್ಥೆ ಸಸ್ಯಾಹಾರಿ ಆಹಾರಗಳು, ಸೌಂದರ್ಯ ವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಮುಂತಾದ ವಸ್ತುಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಸಾವಿರಾರು ರೂಪಾಯಿ ತೆಗೆದುಕೊಂಡು ಹಲಾಲ್ ಪ್ರಮಾಣಪತ್ರವನ್ನು ನೀಡುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಟ್ಯಾಕ್ಸ್ ಹಣಕ್ಕೆ ಕೊಕ್ಕೆ ಹಾಕಿದಂತಾಗಿದೆ. ಈ ಹಣಗಳನ್ನೇ ಇಸ್ಲಾಮಿಕ್ ಸಂಘಟನೆಗಳು ಬಳಸಿಕೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿವೆ. ಕೂಡಲೇ ಸರ್ಕಾರ ಹಲಾಲ್ ಪ್ರಮಾಣೀಕರಣ ಪದ್ದತಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಎಫ್ ಎಸ್ ಎಸ್ ಎಐ ಇರುವಾಗ ಹಲಾಲ್ ಪ್ರಮಾಣಪತ್ರ ನೀಡುವ ಇಸ್ಲಾಮಿಕ್ ಸಂಸ್ಥೆಗಳ ಅವಶ್ಯಕತೆ ಏನಿದೆ? ಈ ಹಲಾಲ್ ಪ್ರಮಾಣ ಪ್ರಮಾಣಪತ್ರಕ್ಕೆ ಮೊದಲು 21.500 ರೂ ಮತ್ತು ಪ್ರತಿವರ್ಷ ನವೀಕರಣಕ್ಕೆ 15.000 ರೂ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ನಿರ್ಮಾಣವಾಗುತ್ತಿರುವ ಹಲಾಲ್ ನ ಸಮಾನಾಂತರ ಆರ್ಥಿಕತೆಯನ್ನು ತಡೆಗಟ್ಟುವುದು ಅನಿವಾರ್ಯವಾಗಿದೆ. ಅದಕ್ಕಾಗಿಯೇ ಈ ವರ್ಷದ ದೀಪಾವಳಿಗೆ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರ ಹಕ್ಕು ಎಂದು ಹಲಾಲ್ ಪ್ರಮಾಣಿಕೃತ ಉತ್ಪನ್ನಗಳು, ಮೆಕ್ ಡೊನಾಲ್ಡ್ ಮತ್ತು ಡೊಮಿನೋಸ್ ಆಹಾರವನ್ನು ಬಹಿಷ್ಕಾರಿಸಬೇಕು. ಮತ್ತು ಹಲಾಲ್ ಮುಕ್ತ ದೀಪಾವಳಿ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
Kshetra Samachara
29/10/2021 02:13 pm