ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಂಜುಮನ್ ಎ ಇಸ್ಲಾಂ ಕಮೀಟಿ ಅವಿರೋಧ ಆಯ್ಕೆಗೆ ಸಮಾಜ ಬದ್ಧ

ಕುಂದಗೋಳ : ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿಯ ಚುನಾವಣೆ ಮಾಡುವುದು ಯಾವುದೇ ಕಾರಣಕ್ಕೂ ಬೇಡ. ಚುನಾವಣೆ ಮಾಡುವ ಮೂಲಕ ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಮೂಡಬಾರದು, ಅದಕ್ಕಾಗಿ ಗುರು ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಮಾಜದ ಒಗ್ಗೂಡಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಮಲ್ಲಿಕ್ ಶಿರೂರ್ ಹೇಳಿದರು.

ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮೀಟಿಯ ಚುನಾವಣೆ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೆಲವರು ಅಸಮಾಧಾನದಿಂದ ಚುನಾವಣೆ ಮಾಡಬೇಕೆಂದು ಬೆರಳೆಣಿಕೆಯಷ್ಟು ಸಮಾಜದ ವ್ಯಕ್ತಿಗಳು ಮಾತ್ರ ವೈಯಕ್ತಿಕ ಒತ್ತಾಯ ಮಾಡುತ್ತಿದ್ದಾರೆ. ಇದು ಮುಸ್ಲಿಂ ಸಮಾಜದ ಬಾಂಧವರು ಜಮಾತ್ ಚುನಾವಣೆ ನಡೆಸಬೇಕೆಂಬ ಒತ್ತಾಯವಲ್ಲ.

ಬಹುತೇಕ ಮುಸ್ಲಿಂ ಸಮಾಜದ ಬಾಂಧವರು ಹಾಗೂ ಪಟ್ಟಣದಲ್ಲಿರುವ 8 ಜಮಾತುಗಳು ಚುನಾವಣೆ ಬೇಡಾ, ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡೋಣ ಎಂದು ತಿಳಿಸಿದ್ದಾರೆ. ಅದರಂತೆ ನಾವು 8 ಜಮಾತುಗಳಿಗೆ ತಲಾ ಇಬ್ಬರು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಈ ಪ್ರಕ್ರಿಯೆ ಬಗ್ಗೆ ವಕ್ಫ್ ಬೋರ್ಡ್ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜ ಬಾಂಧವರು ಮುಖಂಡರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

28/10/2021 04:07 pm

Cinque Terre

18.43 K

Cinque Terre

1

ಸಂಬಂಧಿತ ಸುದ್ದಿ