ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯ ಅಶೋಕನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟನೆಗಳ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.
ಹೌದು..ಕರ್ನಾಟಕ ಸಂಗ್ರಾಮ ಸೇನೆಯ ಮುಖಂಡ ಸಂಜೀವ ದುಮ್ಮಕನಾಳ ಎಂಬುವವರು ಅಧಿಕಾರಿಗಳೊಂದಿಗೆ ಮಾತನ ಚಕಮಕಿ ನಡೆಸಿದ್ದಾರೆ. ಗೀತಗಾಯನ ವೇದಿಕೆಯಲ್ಲಿಯೇ ದಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಸಿಎಂ ಬಸವರಾಜ ಬೊಮ್ಮಾಯಿಯವರು ಚಾಲನೆ ನೀಡಿರುವ ಲಕ್ಷ ಕಂಠಗಳಲ್ಲಿ ಗೀತಗಾಯನ ಕಾರ್ಯಕ್ರಮದಲ್ಲಿ ಇಂತಹದೊಂದು ಅವ್ಯವಸ್ಥೆ ತಲೆದೂರಿರುವುದು ಕನ್ನಡ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿದೆ.
Kshetra Samachara
28/10/2021 12:13 pm