ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಅ.28 ರಿಂದ ಆರ್‌ಎಸ್‌ಎಸ್ ಬೈಠಕ್

ಧಾರವಾಡ: ಅಕ್ಟೋಬರ್ 28 ರಿಂದ 30 ರವರೆಗೆ ಮೂರು ದಿನಗಳ ಕಾಲ ಧಾರವಾಡ ತಾಲೂಕಿನ ಗರಗ ಗ್ರಾಮದ ಬಳಿ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಬೈಠಕ್ ನಡೆಯಲಿದೆ ಎಂದು ಸಂಘದ ಪ್ರಚಾರ ಪ್ರಮುಖರಾದ ಸುನೀಲ ಅಂಬೇಕರ ಹೇಳಿದರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕಾರ್ಯಕಾರಿ ಬೈಠಕ್ ಮಾಡುತ್ತೇವೆ. 350 ಪ್ರಾಂತದ ಎಲ್ಲ ಪ್ರಮುಖ ಕಾರ್ಯಕರ್ತರು ಬೈಠಕ್‌ಗೆ ಬರುತ್ತಾರೆ ಎಂದರು.

ಮುಂದಿನ ಯೋಜನೆಗಳ ಕುರಿತು ಕಾರ್ಯಕರ್ತರೊಂದಿಗೆ ಬೈಠಕ್ ಹಾಗೂ ಚರ್ಚೆ ನಡೆಯಲಿದೆ. ಸದ್ಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲೆ ದಾಳಿ, ದೇವಾಲಯಗಳ ಧ್ವಂಸಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಕೊರೊನಾ ಬಗ್ಗೆ ಎಲ್ಲ ಜಾಗೃತಿಗಳನ್ನಿಟ್ಟುಕೊಂಡೇ ಕಾರ್ಯಕ್ರಮ ನಡೆಸಲಾಗುತ್ತಿದೆ. ಜುಲೈನಲ್ಲೇ ಈ ಬೈಠಕ್ ನಡೆಸಬೇಕಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು ಎಂದರು.

1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿದೆ. ಅದಕ್ಕಾಗಿ 100 ವರ್ಷದ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆಯಲಿದೆ. ಮೂರು ವರ್ಷದಲ್ಲಿ ಏನು ಮಾಡಬಹುದು? ಎಲ್ಲಿ ನಮ್ಮ ಸಂಘ ತಲುಪಿಲ್ಲ ಎನ್ನುವುದರ ಬಗ್ಗೆ ವಿಚಾರ ವಿನಿಮಯಗಳು ನಡೆಯುತ್ತವೆ. ಆದರೆ, ಈ ಕಾರ್ಯಕ್ರಮದಲ್ಲಿ ಯಾವುದೇ ಮಂತ್ರಿಗಳು ಭಾಗವಹಿಸುವುದಿಲ್ಲ ಎಂದರು.

Edited By : Nagesh Gaonkar
Kshetra Samachara

Kshetra Samachara

26/10/2021 03:06 pm

Cinque Terre

23.3 K

Cinque Terre

3

ಸಂಬಂಧಿತ ಸುದ್ದಿ