ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಲಜೀವನ್ ಮಿಷನ್: ಕುಡಿಯುವ ನೀರಿಗೆ ಮೀಟರ್‌ ಅಳವಡಿಕೆ ಕೈಬಿಡಬೇಕೆಂದು ಶಾಸಕರಿಗೆ ಮನವಿ

ಕಲಘಟಗಿ: ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ರೈತ ಕೃಷಿ ಕಾರ್ಮಿಕರ ಹಾಗೂ ಎ ಐ ಕೆ ಕೆ ಎಂ ಎಸ್ ಸಂಘಟನೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮೀಟರ್‌ ಅಳವಡಿಕೆ ಕೈಬಿಡಬೇಕೆಂದು ಆಗ್ರಹಿಸಿ ಶಾಸಕ ಸಿ ಎಂ ನಿಂಬಣ್ಣವರಗೆ ಮನವಿ ಸಲ್ಲಿಸಲಾಯಿತು.

ಜಲಜೀವನ್ ಮಿಷನ್ ಅಡಿಯಲ್ಲಿ ನಳಗಳಿಗೆ ಮೀಟರ್ ಅಳವಡಿಕೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದ ಸಂದರ್ಭದಲ್ಲಿ,ಮೀಟರ್ ಅಳವಡಿಕೆ ಕೈಬಿಡಬೇಕು,ನಿಸರ್ಗದತ್ತವಾಗಿ ಸಿಗುವ ನೀರನ್ನು,ಸರ್ಕಾರ ಮಾರಾಟ ಮಾಡಬಾರದು,ನೀರು ಮಾರಾಟ ಮಾಡುವುದು ಅಮಾನವೀಯ,ನೀರು ಮೂಲಭೂತ ಹಕ್ಕು,ಆಳುವ ಸರ್ಕಾರ ನೀರು ಉಚಿತವಾಗಿ ನೀಡದಿದ್ದಲ್ಲಿ,ಮತ್ತೇನು ಕೊಡಲು ಸಾಧ್ಯವಿದೆ ಕಾರಣ ನೀರನ್ನು ಮಾರಾಟ ಮಾಡದಂತೆ ಶಾಸಕರಲ್ಲಿ ಮನವಿ ಮಾಡಿದರು.ಶಾಸಕ ಸಿ ಎಂ ನಿಂಬಣ್ಣವರ ಮನವಿ ಸ್ವೀಕರಿಸಿ ಮಾತನಾಡಿ,ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ,ಪಂಚಾಯಿತಿಯಲ್ಲಿ ಯಾವುದೇ ಕೆಲಸಕ್ಕೆ ಹೋದಾಗ ನೀರಿನ ಬಿಲ್ ತುಂಬಲು ಒತ್ತಾಯಿಸಿದ್ದರೆ,ತಮ್ಮ ಗಮನಕ್ಕೆ ತಂದಲ್ಲಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆರ್ ಕೆ ಎಸ್ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ,ತಾಲೂಕ ಅಧ್ಯಕ್ಷ ಅಲ್ಲಾವುದ್ದಿನ ಹಡ್ಲಿ,ಮಲ್ಲಪ್ಪ ಕೊಟ್ಟಣದ,ಪ್ರವೀಣ ಎಲಿವಾಳ,ತಿರುಕಪ್ಪ ಹಟ್ಟಿಗೇರ,ಕುಮಾರ ಜಮ್ಮಿಹಾಳ,ಈಶ್ವರ್ ಶೆಟ್ಟಿನವರ,ಶಶಿಕಲಾ ಮೇಟಿ ಗ್ರಾ ಪಂ ಉಪಾಧ್ಯಕ್ಷರು, ಸದಸ್ಯರು ಇದ್ದರು.

Edited By : Nagesh Gaonkar
Kshetra Samachara

Kshetra Samachara

21/10/2021 02:58 pm

Cinque Terre

29.42 K

Cinque Terre

3

ಸಂಬಂಧಿತ ಸುದ್ದಿ