ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತಾಂತರ ಆರೋಪ! ರಸ್ತೆ ತಡೆದು ಪ್ರತಿಭಟನೆ ಮಾಡಿದ ಹಿಂದೂಪರ ಸಂಘಟನೆಗಳು

ಹುಬ್ಬಳ್ಳಿ: ಭೈರಿದೇವರಕೊಪ್ಪದ ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಮತಾಂತರಕ್ಕೆ ಪ್ರಚೋದನೆ‌ ಮಾಡುತ್ತಿದ್ದ ಸೋಮಲಿಂಗ ಅವರಾದಿ ಎಂಬಾತನನ್ನು‌ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಲಿಂಗಾಯತ ಸಮುದಾಯದ ಪ್ರಮುಖರು ಹುಬ್ಬಳ್ಳಿ ಧಾರವಾಡ ನಡುವಿನ ರಸ್ತೆ ಸಂಪೂರ್ಣ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾರ್ಥನೆ ಹೆಸರಲ್ಲಿ ಹಿಂದೂಗಳನ್ನ ತಂದು ಮತಾಂತರ ಮಾಡಲಾಗುತ್ತಿದೆ ಎಂದು ಸಂಘಟನೆಯವರು ಆರೋಪಿಸಿದರು. ಸೋಮಲಿಂಗ ಕ್ರೈಸ್ತ ಸಮುದಾಯದ ಪಾಸ್ಟರ್ ಆಗಿ ಬದಲಾಗಿದ್ದಾರೆ. ಇದನ್ನು ವಿರೋಧಿಸಿ ಪ್ರಾರ್ಥನಾ ಮಂದಿರದ ಹೊರಗೆ ಸಂಘಟನೆಯವರು ಭಜನೆ ಮಾಡಿದರು. ಈ ವೇಳೆ ಕ್ರಿಶ್ಚಿಯನ್ನರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂದಿದ್ದಾರೆ.

ಮತಾಂತರಕ್ಕೆ ಪ್ರಚೋದನೆ ನೀಡಿದ ಸೋಮು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸ್ ಠಾಣೆ ಆವರಣಕ್ಕೆ ಕರೆದುಕೊಂಡು ‌ಬಂದರೂ ಪೊಲೀಸರು‌ ಬಂಧಿಸಿಲ್ಲ. ತಕ್ಷಣವೇ ಬಂಧಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟು ಸಂಘಟನೆಯವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ‌ಮುಂದುವರಿಸಿದ್ದಾರೆ.

ಪೊಲೀಸ್‌ ಠಾಣೆಯ ಸಮೀಪದಲ್ಲಿಯೇ ಆರೋಪಿ ಸೋಮು ಅವರ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಅವರಿಂದ ತಪ್ಪಿಸಿಕೊಂಡ ಸೋಮು ಅವರು ಅಂಬುಲೆನ್ಸ್‌ ಹತ್ತಿ ಆಸ್ಪತ್ರೆಗೆ ತೆರಳಿದರು.

Edited By : Nagesh Gaonkar
Kshetra Samachara

Kshetra Samachara

17/10/2021 08:34 pm

Cinque Terre

86.33 K

Cinque Terre

48

ಸಂಬಂಧಿತ ಸುದ್ದಿ