ಹುಬ್ಬಳ್ಳಿ:ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಏರಿಕೆಯಿಂದ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಆದರೆ ಸಿಎಂ. ಬಸವರಾಜ್ ಬೊಮ್ಮಾಯಿ ಇಂದು ಇಲ್ಲಿ ವಾಹನ ಸವಾರರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಏನ್ ಅದು ಹೇಳುತ್ತವೆ ಬನ್ನಿ.
ಸದ್ಯ ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಗಗನಕ್ಕೇರಿದೆ. ಇದರ ಏಟಿಗೆ ವಾಹನ ಸವಾರರು ನಲುಗಿದ್ದಾರೆ. ವಾಹನವನ್ನ ಹೊರಗಡೆ ತರಲು ಎರಡು ಮೂರು ಸಲ ಯೋಚಿಸ್ತಾರೆ. ಇಂತಹ ಪರಿಸ್ಥಿತಿಯಲ್ಲಿಯೆ ಸಿಎಂ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಉಪಚುನಾವಣೆ ಬಳಿಕ ತೈಲ ಬೆಲೆ ಇಳಿಕೆ ಮಾಡುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ ಸಿಎಂ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ,ತೈಲ ಬೆಲೆ ಆರ್ಥಿಕತೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ, ತೈಲ ಬೆಲೆ ಇಳಿಕೆಯಾಗುತ್ತದೆ. ಉಪಚುನಾವಣೆ ಬಳಿಕ ತೈಲ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದಿದ್ದಾರೆ ಸಿಎಂ ಬೊಮ್ಮಾಯಿ.
Kshetra Samachara
17/10/2021 05:19 pm