ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಮತ್ತು ಶ್ರೀ ಚನ್ನಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯಿಸಿದ ಯುಜೆಎಸ್

ಹುಬ್ಬಳ್ಳಿ: ಉಣಕಲ್ ಕೆರೆಯನ್ನು ಶ್ರೀ ಚನ್ನಬಸವ ಸಾಗರವೆಂದು ನಾಮಕರಣ ಮಾಡಿ ಅಲ್ಲಿ ಬೃಹತ್ತಾದ ಶ್ರೀ ಚನ್ನಬಸವೇಶ್ವರ ಮೂರ್ತಿ ಸ್ಥಾಪಿಸಬೇಕು, ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಎದುರುಗಡೆ ಇರುವ ಶ್ರೀ ವಿವೇಕಾನಂದರ ಮೂರ್ತಿ ತೆರವುಗೊಳಿಸಿ ರೈಲ್ವೆ ನಿಲ್ದಾಣ ಹೆಸರಿನಂತೆ ಬೃಹತ್ತಾದ ಶ್ರೀ ಸಿದ್ಧಾರೂಢರ ಮೂರ್ತಿಯನ್ನು ಸ್ಥಾಪಿಸಬೇಕೆಂದು ಉತ್ತರ ಜನಶಕ್ತಿ ಸೇನಾ ಪಕ್ಷದ ಸಂಸ್ಥಾಪಕರಾದ ಎಸ್.ಎಸ್ ಶಂಕರಣ್ಣ ಒತ್ತಾಯಿಸಿದೆ.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿಯಲ್ಲೇ ಇಲ್ಲಿನ ಸ್ಥಳೀಯ ಜನರ ಸ್ವಾಭಿಮಾನಕ್ಕೆ ಅವರು ಪೂಜಿಸುವ ಶರಣ ಸಂತರಿಗೆ, ಅವರು ಆರಾಧಿಸುವ ಹುಬ್ಬಳ್ಳಿಯ ಹೆಮ್ಮೆಯ ಹಿರಿಯ ಧೀಮಂತ ನಾಯಕರಿಗೆ ಆಡಳಿತ ಸರ್ಕಾರದಿಂದ ಅವಮಾನವಾಗಿದೆ ಅಲ್ಲದೇ ಜನಮನದಿಂದ ಆ ಮಹನೀಯರನ್ನು ಮರೆಮಾಚಿ ಉತ್ತರ ಭಾರತದ ಹಿರಿಯರನ್ನು ಸ್ಥಾಪಿಸುವ ಹುನ್ನಾರ ಆಡಳಿತ ಸರ್ಕಾರದ್ದು ಆಗಿದೆ ಎಂದು ಆರೋಪಿಸಿದರು.

ನಮ್ಮ ಮನೆಯಲ್ಲಿ ನಮ್ಮ ಹಿರಿಯರ ಫೋಟೋ ಇಟ್ಟು ಪೂಜಿಸದೇ, ಪಕ್ಕದ ಮನೆಯ ಹಿರಿಯರ ಇಟ್ಟು ಪೂಜಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ ಅವರು ಕೂಡಲೇ ಸ್ಥಳೀಯ ಜನರ ಭಾವನೆಗಳಿಗೆ ಗೌರವ ಕೊಟ್ಟು ಸ್ಟೇಶನ್ ರೋಡ್ ನಲ್ಲಿ ಬೃಹತ್ತಾದ ಸರದಾರ ಮೆಹಬೂಬ್ ಅಲಿಖಾನ ರಸ್ತೆಯ ನಾಮಫಲಕ ಅಳವಡಿಸಬೇಕು, ಹೊಸೂರು ಸರ್ಕಲ್ ಅನ್ನು ಈಗಾಗಲೇ ಸಂಗೊಳ್ಳಿ ರಾಯಣ್ಣ ಸರ್ಕಲ್ ಎಂದು ನಾಮಫಲಕ ಇಟ್ಟಿದ್ದು ಅಲ್ಲಿ ಬೃಹತ್ತಾದ ವೀರ ಸಂಗೊಳ್ಳಿ ರಾಯಣ್ಣ ನ ಮೂರ್ತಿ ಯನ್ನು ಸ್ಥಾಪಿಸಿ ನಮ್ಮ ಮಹನೀಯ, ಹಿರಿಯರಿಗೆ ಆದ ಅನ್ಯಾಯ ಸರಿ ಪಡಿಸಬೇಕೆಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

16/10/2021 12:31 pm

Cinque Terre

24.93 K

Cinque Terre

0

ಸಂಬಂಧಿತ ಸುದ್ದಿ