ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಬಲ್ ಎಂಜಿನ್ ಸರ್ಕಾರ ದುಡ್ಡಿನ ರುಚಿ ಕಂಡು ಜನರ ಭಕ್ಷಕವಾಗಿದೆ; ಉಳ್ಳಾಗಡ್ಡಿಮಠ ಕಿಡಿ

ಹುಬ್ಬಳ್ಳಿ: ರಾಜ್ಯದಲ್ಲೂ ಡೀಸೆಲ್ ಬೆಲೆ 100 ರೂ. ಗಡಿ ದಾಟಿದೆ. ಜನಸಾಮಾನ್ಯ ತೈಲಬೆಲೆಯ ಬಗ್ಗೆ ಎಷ್ಟೇ ಗೋಳು ತೋಡಿಕೊಂಡರೂ ಸುಲಿಗೆಕೋರ ಡಬಲ್ ಎಂಜಿನ್ ಸರ್ಕಾರಕ್ಕೆ ಆ ಗೋಳು ಕೇಳುತ್ತಿಲ್ಲ. ಒಮ್ಮೆ ಮನುಷ್ಯನ ರಕ್ತದ ರುಚಿ ನೋಡಿದ ಪ್ರಾಣಿ, ಹೇಗೆ ನರಭಕ್ಷಕನಾಗಿ ಬದಲಾಗುತ್ತದೆಯೋ, ಅದೇ ರೀತಿ ಈ ಡಬಲ್ ಎಂಜಿನ್ ಸರ್ಕಾರ ದುಡ್ಡಿನ ರುಚಿ ಕಂಡು ಜನರ ಭಕ್ಷಕವಾಗಿದೆ ಎಂದು ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅಬಕಾರಿ ಸುಂಕ ಇಳಿಸುವ ಮೂಲಕ ತೈಲದ ಬೆಲೆ ಇಳಿಸುವ ಅವಕಾಶವಿದೆ. ಆದರೆ ಎರಡೂ ಸರ್ಕಾರಗಳಿಗೆ ಸುಂಕ ಇಳಿಸುವ ಇರಾದೆಯೇ ಇಲ್ಲ. ಕೇಂದ್ರಕ್ಕೆ ಲಕ್ಷಾಂತರ ಕೋಟಿ ಕಾರ್ಪೊರೇಟ್ ತೆರಿಗೆ ಮನ್ನಾ ಮಾಡಲು ಸಾಧ್ಯವಿದೆ. ಆದರೆ ಬಡವರಿಗೆ ಹೊರೆಯಾಗಿರುವ ಅಬಕಾರಿ ಸುಂಕ ಕಡಿಮೆ ಮಾಡಬೇಕು ಎಂಬ ಅಂತಃಕರಣವೇ ಇಲ್ಲ. ಕೇಂದ್ರದ ದೃಷ್ಟಿಯಲ್ಲಿ ಬಡವರು ಮನುಷ್ಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತೈಲಬೆಲೆ ಪ್ರತಿದಿನ ಏರಿಕೆಯಾಗುತ್ತಿರುವ ಮಧ್ಯೆಯೇ ಕಚ್ಛಾತೈಲದ ಬೆಲೆ ಶೇ.2.08% ರಷ್ಟು ಹೆಚ್ಚಳವಾಗಿದೆ. ಕೊರೊನಾ ಅವಧಿಯಲ್ಲಿ ಕಚ್ಛಾತೈಲದ ಬೆಲೆ ಸಾರ್ವತ್ರಿಕ ಕನಿಷ್ಟ ಮಟ್ಟಕ್ಕೆ ಇಳಿದಿತ್ತು. ಆಗಲೇ ಕೇಂದ್ರ ತೈಲದ ಬೆಲೆ ಇಳಿಸಿರಲಿಲ್ಲ. ಈಗ ಬೆಲೆ ಇಳಿಸಲಿದೆಯೆ?ಕಚ್ಛಾತೈಲದ ಬೆಲೆ ಹೆಚ್ಚಳವನ್ನೇ ನೆಪ ಮಾಡಿಕೊಂಡು ಮತ್ತಷ್ಟು ಸುಲಿಗೆ ಮಾಡುವುದು ಖಚಿತ ಎಂದು ಹೇಳಿದ್ದಾರೆ.

ತೈಲ ಬೆಲೆಯೇರಿಕೆಯಿಂದಾಗುವ ದೂರಗಾಮಿ ಪರಿಣಾಮಗಳನ್ನು ಊಹಿಸುವ ಸಾಮರ್ಥ್ಯವಂತೂ ಈ ಸರ್ಕಾರಕ್ಕಿಲ್ಲ. ಆದರೆ ಬೆಲೆಯೇರಿಕೆಯಿಂದ ಜನಸಾಮಾನ್ಯನ ದಿನನಿತ್ಯದ ಜೀವನದ ಮೇಲಾಗುತ್ತಿರುವ ನೇರ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳದಷ್ಟು ಕನಿಷ್ಟ ಜ್ಞಾನವೂ ಈ ಸರ್ಕಾರಕ್ಕಿಲ್ಲವೆ.? ಇದನ್ನು ಅಜ್ಞಾನವೆನ್ನಬೇಕೋ ಅಥವಾ ದುಡ್ಡಿನ ದುರಾಸೆಯೆನ್ನಬೇಕೋ ಎಂದು ಪ್ರಶ್ನಿಸಿದ್ದಾರೆ.

ಮೋದಿಯವರು ತಾವು ಪ್ರಧಾನಿಯಾಗುವ ಮೊದಲು ತೈಲಬೆಲೆಯೇರಿಕೆಯೆ ವಿರುದ್ಧ ಉದ್ದುದ್ದ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.ಈಗ ಅವರ ಅವಧಿಯಲ್ಲಿ ತೈಲ ಬೆಲೆ ಹಿಂದೆಂದೂ ಕಂಡಿರದ ಹೆಚ್ಚಳವಾಗಿದೆ. ಮೋದಿಯವರು ಈ ಹಿಂದೆ ತಾವು ಮಾಡಿದ ಭಾಷಣವನ್ನು ಒಮ್ಮೆ ನೋಡಲಿ. ಅವರ ಹೃದಯದಲ್ಲಿ ಆತ್ಮಸಾಕ್ಷಿಯೆಂಬುದು ಲವಲೇಶವಾದರೂ ಇದ್ದರೆ ತೈಲ ಬೆಲೆ ಇಳಿಸಲಿ ಎಂದು ಆಗ್ರಹಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

13/10/2021 11:30 pm

Cinque Terre

48.2 K

Cinque Terre

13

ಸಂಬಂಧಿತ ಸುದ್ದಿ