ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ಸಾರ್ವಜನಿಕರು ಹುಬ್ಬಳ್ಳಿಯಲ್ಲಿ ಸಕ್ಕರೆ ಮತ್ತು ಜವಳಿ ಖಾತೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ನಿವಾಸದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗ್ರಾಮಕ್ಕೆ ಮೂಲಭೂತ ಸೌಕರ್ಯದ ಜೊತೆ ಹಿಂದುಳಿದ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಹಾಗೂ ಗುಡೇನಕಟ್ಟಿಯಿಂದ ಹಳಿಯಾಳ ರಸ್ತೆಯು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು ರೈತರು ತಮ್ಮ ಹೊಲಕ್ಕೆ ಹೋಗಲು ರಸ್ತೆ ಮಳೆಗಾಲದಲ್ಲಿ ಕೆಸರುಗದ್ದೆ ದಂತಾಗುತ್ತದೆ ಹೀಗಾಗಿ ಹಳ್ಯಾಳ ಗುಡೇನಕಟ್ಟಿ ಈ ಮಾರ್ಗದ ರಸ್ತೆಯನ್ನು ದುರಸ್ತಿ ಮಾಡಿಸಿ ಡಾಂಬರೀಕರಣ ಮಾಡಿಕೊಡಬೇಕೆಂದು ಹಾಗೂ ನಾರಾಯಣಪುರ ಗುಡೇನಕಟ್ಟಿ ರಸ್ತೆಯು ಸಂಪೂರ್ಣವಾಗಿ ಗಿಡಗಂಟೆ ಬೆಳೆದು ರಸ್ತೆ ಇದ್ದು ಇಲ್ಲದಂತಾಗಿದೆ ಹೀಗಾಗಿ ಯಾವ ಒಬ್ಬ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಕೂಡಲೇ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಹಳ್ಳಿಯ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರ ನೀಡಿ ವಿವರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸೊರಟೂರ, ಪಕ್ಕೀರಪ್ಪ ಮೂಲಿಮನಿ ಬಸವರಾಜ ಯೋಗಪ್ಪನವರ, ಸಕ್ರಪ್ಪ ಕಂಬಾರ, ಸಂತೋಷ ಬೆಡತೂರ, ಗುರುಪಾದಪ್ಪ ಹೊಸಳ್ಳಿ, ಬಸವರಾಜ ಕಮಲದಿನ್ನಿ, ಮುತ್ತಪ್ಪ ದೊಡ್ಡಮನಿ, ಹಾಗೂ ಗ್ರಾಮದ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Kshetra Samachara
12/10/2021 07:15 pm