ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆಡಳಿತಕ್ಕಾಗಿ ಎರಡು ಬಣಗಳ ನಡುವೆ ತಿಕ್ಕಾಟ

ಧಾರವಾಡ: ಧಾರವಾಡದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಆಡಳಿತಕ್ಕಾಗಿ ಎರಡು ಬಣಗಳ ನಡುವೆ ತಿಕ್ಕಾಟ ನಡೆದಿದ್ದು, ಒಂದು ಬಣ ಹೈಕೋರ್ಟ್‌ನಿಂದ ಮಧ್ಯಂತರ ತಡೆಯಾಜ್ಞೆ ತಂದು, ಅಧಿಕಾರ ಹಸ್ತಾಂತರಿಸುವಂತೆ ಪಟ್ಟು ಹಿಡಿದಿದೆ.

78 ಜನ ಸದಸ್ಯರಿರುವ ಧಾರವಾಡ ಹಿಂದಿ ಪ್ರಚಾರ ಸಭೆಯಲ್ಲಿ 2020ರ ಜನೆವರಿ ತಿಂಗಳಲ್ಲಿ ಪದಾಧಿಕಾರಿಗಳ ಚುನಾವಣೆ ನಡೆದಿತ್ತು. ಆದರೆ, ದಕ್ಷಿಣದ ಚೆನ್ನೈ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರು, ಧಾರವಾಡ ಹಿಂದಿ ಪ್ರಚಾರ ಸಭೆಯ 78 ಜನ ಸದಸ್ಯರಿರುವ ಪ್ರಚಾರ ಸಭೆಯನ್ನು ಸೂಪರ್ ಸೀಡ್ ಮಾಡಿದ್ದರು. ಹೀಗಾಗಿ 2020ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಆಡಳಿತ ಮಂಡಳಿಯನ್ನು ಸಭೆಗೆ ನೇಮಿಸಲಾಗಿತ್ತು. ಈರೇಶ ಅಂಚಟಗೇರಿ ಅಧ್ಯಕ್ಷರಾಗಿ ಮತ್ತು ಅರುಣ ಜೋಶಿ, ಎಂ.ಆರ್.ಪಾಟೀಲ ಸಲಹಾ ಸಮಿತಿ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಇದನ್ನು ಪ್ರಶ್ನಿಸಿ ಧಾರವಾಡ ಹಿಂದಿ ಪ್ರಚಾರ ಸಭೆಯ ಹಳೇ ಮಂಡಳಿಯಲ್ಲಿನ 13 ಜನ ಪದಾಧಿಕಾರಿಗಳು ಧಾರವಾಡ ಹೈಕೋರ್ಟ್‌ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರದ ಹಾಗೂ ದಕ್ಷಿಣದ ಚೆನ್ನೈ ಹಿಂದಿ ಪ್ರಚಾರ ಸಭೆಯ ಸೂಪರ್ ಸೀಡ್ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು. ಇದನ್ನು ವಿಚಾರಣೆ ಮಾಡಿರುವ ಹೈಕೋರ್ಟ್‌ ಏಕಸದಸ್ಯ ಪೀಠ, ಮಂಡಳಿಯನ್ನು ಸೂಪರ್ ಸೀಡ್ ಮಾಡಿದ್ದಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಹೀಗಾಗಿ ಶುಕ್ರವಾರ ವಕೀಲರು ಧಾರವಾಡ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಚೇರಿಗೆ ಬಂದು, ಹೈಕೋರ್ಟ್ ತಡೆಯಾಜ್ಞೆ ಪ್ರತಿ ಹಾಜರು ಪಡಿಸಿ, ಹಳೆಯ ಪದಾಧಿಕಾರಿಗಳಿಗೆ ಅಧಿಕಾರ ಬಿಡುವಂತೆ ಪಟ್ಟು ಹಿಡಿದರು. ಆದರೆ ಚೆನ್ನೈ ಹಿಂದಿ ಪ್ರಚಾರ ಸಭೆಯಿಂದ ಬಂದಿರುವ ಕಾರ್ಯದರ್ಶಿ ರಾಧಾಕೃಷ್ಣನ್, ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ಈ ಎಲ್ಲ ವಿಷಯ ತಂದಿದ್ದು, ಅಲ್ಲಿಂದ ಆದೇಶ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಇದರಿಂದ ಹಾಲಿ ಆಡಳಿತ ಮಂಡಳಿ ಸದಸ್ಯರು ಹಾಗೂ ಹಿಂದಿನ ಸದಸ್ಯರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಎಸಿಪಿ ಅನುಷಾ ಜಿ., ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಿದರು.

Edited By : Shivu K
Kshetra Samachara

Kshetra Samachara

09/10/2021 10:04 am

Cinque Terre

44.12 K

Cinque Terre

8

ಸಂಬಂಧಿತ ಸುದ್ದಿ