ಅಳ್ನಾವರ: ಏನನ್ನಾದರೂ ಸಾಧಿಸಬೇಕು ಅನ್ನೋ ಕಿಚ್ಚು ಎದೆಯೊಳಗೆ ಸದಾ ಉರಿಯುತ್ತಿದ್ದರೆ ಒಂದು ದಿನ ಖಂಡಿತ ಸಾಧಿಸಬಹುದು ಅನ್ನೋದಕ್ಕೆ ಯುವ ನಾಯಕ ಸಂದೀಪ ಭಗವಂತ ಪಾಟೀಲ ಸಾಕ್ಷಿ. ಓದಿದ್ದು ಕೇವಲ 8ನೇ ತರಗತಿಯಾದರೂ ಅವರ ಬದುಕು ಇತರರಿಗೆ ಮಾದರಿ. ಹೀಗಾಗಿ ಇಂದು ಅವರೊಬ್ಬ ಯಶಸ್ವಿ ಉದ್ಯಮಿ ಹಾಗೂ ಬಿಜೆಪಿಯ ನಾಯಕರಾಗಿದ್ದಾರೆ.
8ನೇ ತರಗತಿವರೆಗೆ ಮಾತ್ರ ಓದಿದ ಸಂದೀಪ ಭಗವಂತ ಪಾಟೀಲ ಉದ್ಯಮಿಗಳಾದ ವಿಜಯ ಸಂಕೇಶ್ವರ, ರತನ್ ಟಾಟಾ ಅವರಿಂದ ಸ್ಪೂರ್ತಿ ಪಡೆದು ಶ್ರೀರಾಮ ಕ್ರೇನ್ ಆಟೋಮೊಬೈಲ್ಸ್ ಉದ್ಯಮ ಶುರು ಮಾಡಿ, ಈಗ 11 ಕ್ರೇನ್ ಗಳ ಮಾಲೀಕರಾಗಿದ್ದಾರೆ. ಹೀಗಿದ್ದರೂ ಅವರಲ್ಲಿ ಅಹಂಕಾರ, ದರ್ಪ ಕಾಣಿಸಿದು. ಇಂತಹ ಸಂದೀಪ, ಜನ ಸೇವೆ ಮಾಡುವ ಮನೋಭಾವದಿಂದ 2019ರಲ್ಲಿ ಬಿಜೆಪಿಯ ಮುಖೇನ ರಾಜಕೀಯ ಪ್ರವೇಶ ಮಾಡುತ್ತಾರೆ.
ಮುಂದೆ 2020ರಲ್ಲಿ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ನಂತರ 2021ರಲ್ಲಿ ಅಳ್ನಾವರ ತಾಲೂಕಿನ ಬೆನಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅದರಲ್ಲಿ ಬೆನಚಿ ಗ್ರಾ.ಪಂ ಒಳಪಡುವ ಗ್ರಾಮಗಳಿಗೆ ನಾಮ ಫಲಕ ಅಳವಡಿಸುವುದು, ಬೀದಿ ದೀಪಗಳನ್ನು ನಿರ್ಮಿಸಿ ಕತ್ತಲು ಮುಕ್ತ ಗ್ರಾಮವನ್ನಾಗಿ ಮಾಡಿದರು.
ಅಧಿಕಾರ ವಹಿಸಿಕೊಂಡ ಕೇವಲ ಎಂಟು ತಿಂಗಳಲ್ಲಿ ಅಮೃತ ಗ್ರಾಮ ಪಂಚಾಯಿತಿ ಗೆ ಆಯ್ಕೆಯಾಗುವಂತೆ ಮಾಡಿದ್ದು,ಅದರ ಜೊತೆಗೆ ಗಾಂಧಿ ಪುರಸ್ಕಾರ ಲಭಿಸಿದೆ.
ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರತಿ ಶನಿವಾರ ಒಂದು ಗಂಟೆ ಗ್ರಾಮ ಸ್ವಚ್ಛತಾ ಕೆಲಸ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಸ ವಿಲೇವಾರಿ ಘಟಕ ಸ್ಥಾಪನೆಗೆ ಗುದ್ದಲಿ ಪೂಜೆ ಸಹ ನಡೆಸಿದ್ದಾರೆ. ಇದರ ಜೊತೆಗೆ ಜೀವಜಲವನ್ನು ಸುಮಾರು 3 ಕಿಲೋ ಮೀಟರ್ ದೂರದಿಂದ ಮ್ಯಾನುವೆಲ್ ಕಾಲುವೆ ಮುಖಾಂತರ ತಂದು ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇಷ್ಟೆಲ್ಲ ಕೆಲಸಗಳನ್ನು ಆರಂಭದಲ್ಲಿಯೇ ಮಾಡಿರುವ ಸಂದೀಪ ಪಾಟೀಲ ಅವರು, ಗುಡಿಸಲು ಮುಕ್ತ ಗ್ರಾಮ ನಿರ್ಮಿಸುವುದು, ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳಿಗೆ ಮನೆ ನಿರ್ಮಿಸುವುದು, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು. ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಮೂಲ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಿ ಅದರಲ್ಲಿ ಯಶಸ್ಸು ಕಾಣುವ ಮೂಲಕ ಗಾಂಧಿ ಪುರಸ್ಕಾರ ಗ್ರಾಮ ಮಾಡುವ ಕನಸು ಕಂಡಿದ್ದಾರೆ.
ರಾಜಕೀಯವಾಗಿ ಇಷ್ಟೆಲ್ಲ ಕೆಲಸಗಳನ್ನು ಮಾಡುತ್ತಿರುವ ಬೆನಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸಂದೀಪ ಪಾಟೀಲ, ಸ್ವಂತ ಹಣದಲ್ಲಿ ಸಮಾಜಮುಖಿ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಧಾರವಾಡ, ಹಳಿಯಾಳ, ಅಳ್ನಾವರಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ, ಕೋವಿಡ್ ಲಾಕ್ ಡೌನ್ ಹೊತ್ತಿನಲ್ಲಿ 1 ಟನ್ ತರಕಾರಿ, 200ಕ್ಕೂ ಅಧಿಕ ರೇಷನ್ ಕಿಟ್ ಗಳನ್ನು ಸಹ ನೀಡಿದ್ದಾರೆ.
ಇದಕ್ಕಾಗಿ ತಮ್ಮ ಉದ್ಯಮ ಶೇಕಡ 50ರಷ್ಟು ಆದಾಯ ಮೀಸಲಿಟ್ಟಿದ್ದಾರೆ. ಇಷ್ಟೆಲ್ಲ ಸಾಧಿಸಿರುವ ಸಂದೀಪ ಪಾಟೀಲ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೊನ್ನಾಪುರ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಇನ್ನಷ್ಟು ಸಾಧಿಸಿ ಪಕ್ಷವನ್ನು ಬಲಪಡಿಸುವ ಹಾಗೂ ಈ ಭಾಗದಲ್ಲಿ ಬಿಜೆಪಿ ಇನ್ನಷ್ಟು ಗಟ್ಟಿಯಾಗಿ ನಿಂತುಕೊಳ್ಳುವಂತೆ ಮಾಡುತ್ತೇನೆ ಅನ್ನೋ ಆತ್ಮಸ್ಥರ್ಯ ಹೊಂದಿದ್ದಾರೆ. ಇದಕ್ಕೆ ಜನ ಬೆಂಬಲ ಇದೆ ಅನ್ನೋದು ಯಾರೂ ಮರೆಯುವಂತಿಲ್ಲ.
ನಿರೂಪಣೆ : ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ್
Kshetra Samachara
04/10/2021 12:29 pm