ಹುಬ್ಬಳ್ಳಿ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಈಗಾಗಲೇ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ 3897 ಮನೆ ಕೊಟ್ಟಿದ್ದೇವೆ. ಇನ್ನು ಮುಂದೆಯೂ ಮನೆ ಕೊಡಲು ಸಿದ್ದರಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ರಾಜನಗರ ಬಳಿಯ ಚಾಮುಂಡೇಶ್ವರಿನಗರದಲ್ಲಿಂದು ಕೊಳಚೆ ಪ್ರದೇಶ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಘೋಷಣೆ ಯಾರು ಮಾಡಿ ಹೋದರು, ಯಾರು ಅನುಷ್ಠಾನ ಮಾಡಿದರು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಹು-ಧಾ ಸೆಂಟ್ರಲ್ ವ್ಯಾಪ್ತಿಯಲ್ಲಿ ಸರಿ ಸುಮಾರು 13 ಕೊಳಚೆ ಪ್ರದೇಶಗಳು ಮೂಲಸೌಕರ್ಯಗಳಿಲ್ಲದೆ ಗಲೀಜಿನಿಂದ ಕೂಡಿದ್ದವು, ಇದೀಗ ಜಗದೀಶ್ ಶೆಟ್ಟರ್ ಅವರ ಸತತ ಪ್ರಯತ್ನದಿಂದ ಇಂದು ಹಕ್ಕುಪತ್ರ ಸಿಗುವಂತಾಗಿದೆ ಎಂದರು.
ಬಡ ಕಲ್ಯಾಣ ಕಾರ್ಯಕ್ರಮ ಪ್ರಾರಂಭ ಆಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗಳಲ್ಲೂ 224 ಮಲ್ಟಿ ಸೋರಿಜ್ ಮಾಡಲಾಗುತ್ತಿದೆ. 525 ಕಾಮಗಾರಿ ಪ್ರಗತಿಯಲ್ಲಿದೆ. ಪ್ರತಿ ಮನೆಗೆ 4.80 ಲಕ್ಷ ರೂ ಖರ್ಚ1.60 ಕೇಂದ್ರ, 1.20 ರಾಜ್ಯ ಉಳಿದ ಹಣವನ್ನು ಸ್ಥಳೀಯ ಸಂಸ್ಥೆ ಫಲಾನುಭವಿಗಳು ಭರಿಸಬೇಕಾಗುತ್ತದೆ ಎಂದು ತಿಳಿಸಿದರು.
Kshetra Samachara
02/10/2021 05:29 pm