ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 75 ವರ್ಷದ ನಂತರ, ಬಡವರಿಗೆ ಗಮನ ಹರಿಸಿದ್ರೆ ಅದು ಬಿಜೆಪಿ ಸರ್ಕಾರ- ಸಚಿವ ವಿ. ಸೋಮಣ್ಣ

ಹುಬ್ಬಳ್ಳಿ: ರಾಜ್ಯದ ಎಲ್ಲ ನಾಯಕರ ನೇತೃತ್ವದಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ, ಇಡೀ ರಾಜ್ಯದಲ್ಲಿ 3.27 ಲಕ್ಷ ಮನೆಗಳ ಹಂಚಿಕೆಯಾಗಬೇಕು, ನಾವು ಮೊದಲ ಬಾರಿಗೆ ಕ್ರಾಂತಿಕಾರಿ ತೀರ್ಮಾನ ಮಾಡಿದ್ದೇವೆ,

8 ಸಾವಿರ ಎಕರೆಗೂ ಅಧಿಕ ಜಾಗದ ಹಕ್ಕನ್ನು ನಾವು ಕೊಡೋಕೆ ತೀರ್ಮಾನ ಮಾಡಿದ್ದೇವೆಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದ ಕೊಳಚೆ ಅಭಿವೃದ್ಧಿ ಮಂಡಳಿಯ ಮನೆಗಳ ಹಂಚಿಕೆ ವಿಚಾರವಾಗಿ, ಇನ್ನು 3 ರಿಂದ 4 ತಿಂಗಳಲ್ಲಿ ಎಲ್ಲ ಮನೆಗಳ ಹಂಚಿಕೆ ಮಾಡುತ್ತೇವೆಂದು ಸಚಿವರ ಆಶ್ವಾಸನೆ ನೀಡಿದ್ದಾರೆ.

ಸಿದ್ದರಾಮಯ್ಯನವರ ಅಹಿಂದ ಹೋರಾಟ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಆದ್ರು ಸ್ಟಾರ್ಟ್ ಮಾಡ್ಲಿ ಬೆರೆಯವರಾದ್ರು ಮಾಡ್ಲಿ,

ನಮ್ಮ ಪ್ರಧಾನಿ ಬಡವರಿಗೆ ಸೂರು ಕೊಡಿ, ಮೂಲಭೂತ ಸೌಕರ್ಯ ಕೊಡಿ ಎಂದು ಹೇಳುತ್ತಿದ್ದಾರೆ.

ಬಡವರ ಉದ್ಧಾರಕ್ಕೆ 75 ವರ್ಷದ ನಂತರ, ಬಡವರಿಗೆ ಗಮನ ಹರಿಸಿದ್ರೆ ಅದು ಬಿಜೆಪಿ ಸರ್ಕಾರ ಎಂದರು.

ಸಿದ್ದರಾಮಯ್ಯ ಬಿಜೆಪಿ ತಾಲಿಬಾನ್ ಹೋಲಿಕೆ ವಿಚಾರದಲ್ಲಿ, ಸಾಕಷ್ಟು ಬಾರಿ ಈ ವಿಷಯ ಚರ್ಚೆ ಆಗಿದೆ, ಅವರಿಗೂ ಸಹ ಇದು ಮನವರಿಕೆ ಆಗಿದೆ. ಮುಂದೆ ಸಿದ್ದರಾಮಯ್ಯ ಮಾತನಾಡುವಾಗ ತಮ್ಮ ಹಿಡಿತವನ್ನ ತಾವೇ ಸೃಷ್ಟಿ ಮಾಡಿಕೊಳ್ಳಬೇಕು ಅನ್ನೋದು ಮನವಿ ಎಂದರು.

ಬೆಲೆ ಏರಿಕೆ ವಿಚಾರ, ಯಾವ ಯಾವದನ್ನ ಏನೇನು ಯಾವ ಕಾಲಕ್ಕೆ ತಹಬದಿಗೆ ತರಬೇಕೆಯ್ ಅನ್ನೋದು ಕೇಂದ್ರ ಮಾಡುತ್ತಿದೆ. ಈಗಾಗಲೇ ಮತಾಂತರ ಬಗ್ಗೆ ಕಾನೂನು ಆಗಿದೆ, ಗೃಹ ಸಚಿವರು ಸಹ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದಾರೆ. ಕಾಯ್ದೆ ತರುವ ಮೊದಲೇ ಯಾರು ಈ ರೀತಿಯಾಗಿ ಯೋಚನೆ ಮಾಡುತ್ತಾರೆ. ಅವರು ಚಿಂತನೆ ಮಾಡಬೇಕು ಬಡವರ ಜೀವನಕ್ಕೆ ಕಲ್ಲಗಬಾರದು ಎಂದರು.

ಬಡವನು ಸಹ ಬದುಕುವುದಕ್ಕೆ ಅವಕಾಶ ಇದೆ. ಅಂತವರಿಗೆ ತಲೆ ಕೆಡಿಸಿ ಬೇರೆ ಬೇರೆ ರೂಪ ಮಾಡಿ ಅವರ ನೆಮ್ಮದಿ ಹಾಳು ಮಾಡುವುದು ಒಳ್ಳೆಯದಲ್ಲ, ಇದನ್ನ ಸರ್ಕಾರ ದಿಟ್ಟವಾಗಿ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.

Edited By : Nagesh Gaonkar
Kshetra Samachara

Kshetra Samachara

02/10/2021 03:33 pm

Cinque Terre

52.66 K

Cinque Terre

4

ಸಂಬಂಧಿತ ಸುದ್ದಿ