ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕಾಂಗ್ರೇಸ್ 59 ವರ್ಷಗಳ ಕಾಲ ರೀತಿ ಲೂಟಿ ಮಾಡಿದೆ ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ : ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ಪ್ರತಿಭಟನೆ ವಿಚಾರ, 50 ವರ್ಷದ ನಂತರ ಪ್ರತಿಭಟನೆ ಮಾಡೋದನ್ನ ಕಾಂಗ್ರೆಸ್ ಕಲಿತಿದೆ ಅವರ ಆಳ್ವಿಕೆಯಲ್ಲಿ ಹಲವಾರು ಭ್ರಷ್ಟಾಚಾರ ಮಾಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಹಗರಣಗಳನ್ನ ಮಾಡಿದ್ದಾರೆ, ವಿರೋಧ ಪಕ್ಷಗಳಾಗಿ ಅವರು ಎಚ್ಚರಿಸಲಿ ಅವರ ಭಾವನೆಗಳನ್ನು ನಾವು ಸ್ಪಂದನೆ ನೀಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾತಾನಾಡಿದ ಅವರು, ಕಾಂಗ್ರೇಸ್ 59 ವರ್ಷಗಳ ಕಾಲ ಯಾವ ರೀತಿ ಲೂಟಿ ಮಾಡಿದರು. ನಮ್ಮ ಡಿಫೆನ್ಸ್ ಯಾವ ರೀತಿ ಇತ್ತು, ಯಾವ ರೀತಿ ತುಷ್ಟಿಕರಣದ ರಾಜಕಾರಣ ಮಾಡಿದರು ಅನ್ನೋದು ಗೊತ್ತಿದೆ. ಅತ್ಯಂತ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ರೆ ಅದು ಯುಪಿಎ ಕಾಲದಲ್ಲಿ 2ಜಿ, ಕಲ್ಲಿದ್ದಲು ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿತ್ತು ಎಂದು ಕಾಂಗ್ರೆಸ್ ಪ್ರತಿಭಟನೆಗೆ ತಿರಗೇಟು ನೀಡಿದರು.

ಉಪಚುನಾವಣೆ ಹಿನ್ನಲೆ

ಬಿಜೆಪಿಯಲ್ಲಿ ಒಬ್ಬನೇ ನೇತೃತ್ವದಲ್ಲಿ ಟಿಕೆಟ್ ಹಂಚಿಕೆ ಆಗುವುದಿಲ್ಲ ಯಾವುದೇ ರಾಜ್ಯದಲ್ಲಿ ಪಾರ್ಟಿ ಒಬ್ಬನ ನೇತೃತ್ವದಲ್ಲಿ ಟಿಕೆಟ್ ಮಾಡುವುದಿಲ್ಲ ಅದು ಯಡಿಯೂರಪ್ಪ ಆಗಿರಲಿ ಬೇರೆ ಯಾರಾದರೂ ಆಗಿರಲಿ ಎಂದರು. ಹುಲಿ ಮಲಗಿದ್ದ ಪ್ರಜ್ವಲ್ ರೇವಣ್ಣ ಆರ್ ಎಸ್ ಎಸ್ ದೆಹಲಿಗೆ ಓಡುತ್ತೆ ಅನ್ನೋ ಹೇಳಿಕೆ ವಿಚಾರ, ಹುಲಿ ಅನ್ನೋದು ಯಾರು ಅನ್ನೋದು ಗೊತ್ತಾಗಬೇಕು, ಆಗ ಮಾತ್ರ ಅದಕ್ಕೆ ಉತ್ತರ ಕೊಡೋಕೆ ಸಾದ್ಯ.

ಬಿಜೆಪಿಯನ್ನ ತುಕಡಿ ತುಕಡಿ ಮಾಡ್ತೀವಿ ಅನ್ನೋ ಕನಯ್ಯ ಕುಮಾರ್ ಹೇಳಿಕೆ ವಿಚಾರ ಅವರು ದೇಶವನ್ನ ತುಕಡೆ ತುಕಡೆ ಮಾಡೋಕೆ ಹೊರಟಿದ್ದರು ಆದ್ರೆ ಅದು ಆಗಿಲ್ಲ ಬಿಜೆಪಿ ತುಕಡೆ ಮಾಡೋಕೆ ಆಗಲ್ಲ

2019 ರಲ್ಲಿ ಜನ ಅವರಿಗೆ ಏನು ತೋರಿಸಬೇಕು ಅದನ್ನ ತೋರಿಸಿದ್ದಾರೆ.ಸಿದ್ದರಾಮಯ್ಯ ಮತ್ತು ಅವರ ಪಾರ್ಟಿ ತುಷ್ಟಿಕರಣ ರಾಜಕೀಯಕ್ಕಾಗಿ

ಮುಸಲ್ಮಾನರನ್ನ ಓಲೈಕೆಗೆ ಆರ್ ಎಸ್ ಎಸ್ ಬೈದರೆ ವೋಟು ಸಿಗುತ್ತೆ ಭ್ರಮೆ ಇದೆ,ತುಷ್ಟಿಕರಣದ ರಾಜಕಾರಣದಿಂದ ಅವ್ರು ಈ ರೀತಿ ಹಹೇಳಿಕೆ ಕೊಡುತ್ತಿದ್ದಾರೆ.ಅವರು ಬುದ್ದಿ ಕಲಿಯುವುದಿಲ್ಲಬೆಂಗಳೂರು ಗಲಭೆ ನಡೆದಾಗಲೇ ಅಖಂಡ ಶ್ರೀನಿವಾಸ ವಿರುದ್ಧವೇ ಅವರು ನಡೆದುಕೊಂಡರು ಅದೆಲ್ಲರಿಗೂ ಗೊತ್ತಿರುವ ವಿಚಾರ ಎಂದರು.

Edited By : Shivu K
Kshetra Samachara

Kshetra Samachara

02/10/2021 12:56 pm

Cinque Terre

40.33 K

Cinque Terre

31

ಸಂಬಂಧಿತ ಸುದ್ದಿ