ಕುಂದಗೋಳ : ಕೃಷಿ ಇಲಾಖೆಯಲ್ಲಿನ 3302 ರೈತ ಮಿತ್ರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ ಎಂದು ಆಶ್ವಾಸನೆ ಕೊಟ್ಟ ಕೃಷಿ ಸಚಿವ ಬಿ.ಸಿ.ಪಾಟೀಲ್ ಇದುವರೆಗೂ ರೈತ ಮಿತ್ರ ಹುದ್ದೆ ಭರ್ತಿಗೆ ಮುಂದಾಗಿಲ್ಲ.
ಈ ಕಾರಣ ಅಗ್ರಿ ಡಿಪ್ಲೋಮಾ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು ನಮ್ಗೆ ಎಲ್ಲಿಯೂ ಸಮರ್ಪಕ ಉದ್ಯೋಗ ಸಿಗುತ್ತಿಲ್ಲ ನಮ್ಗೆ ರೈತ ಮಿತ್ರ ಉದ್ಯೋಗ ನೀಡ್ಬೇಕು ಎಂದು ಡಿಪ್ಲೋಮಾ ವಿದ್ಯಾರ್ಥಿಗಳು ಕುಂದಗೋಳಕದ ಕೃಷಿ ಕಟ್ಟಡದ ಉದ್ಘಾಟನೆಗೆ ಬಂದ ಸಚಿವರಿಗೆ ಘೇರಾವ್ ಹಾಕಿ ಅವ್ರೇ ಕೊಟ್ಟ ಆಶ್ವಾಸನೆ ಪ್ರತಿ ಹಾಗೂ ತಮ್ಮ ಅಕ್ಕ ಪಟ್ಟಿ ಪ್ರದರ್ಶಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಯುವಕರ ಮನವಿ ಆಲಿಸಿದ ಕೃಷಿ ಸಚಿವರು ಮುಂದಿನ ನಾಲ್ಕು ತಿಂಗಳ ಒಳಗಾಗಿ ಖಂಡಿತ ರೈತ ಮಿತ್ರ ಹುದ್ದೆ ಭರ್ತಿ ಮಾಡುತ್ತೇವೆ. ಈ ವಿಷಯವಾಗಿ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಪುನಃ ಆಶ್ವಾಸನೆ ಕೊಟ್ಟು ಹೊರಟು ಹೋದರು.
ಒಟ್ಟಾರೆ ಅಂಕಪಟ್ಟಿ ಹಿಡಿದು ವಿವಿಧ ಜಿಲ್ಲೆಗಳಿಂದ ಬಂದು ಸಚಿವರಿಗೆ ಘೇರಾವ್ ಹಾಕಿದ ವಿದ್ಯಾರ್ಥಿಗಳು ಮತ್ತೋಮ್ಮೆ ಸಚಿವರು ಆಶ್ವಾಸನೆ ಕೇಳಿ ಶಾಂತವಾಗಿ ಮನೆ ಸೇರಿದ್ರು.
Kshetra Samachara
01/10/2021 03:55 pm