ಕುಂದಗೋಳ : ಪಟ್ಟಣದ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಬರುವ ಹಿನ್ನೆಲೆಯಲ್ಲಿ ಕುಂದಗೋಳ ಪಟ್ಟಣಕ್ಕೆ ಇಡೀ ರಾಜ್ಯಾದ್ಯಂತ ಡಿಪ್ಲೊಮಾ ಕೃಷಿ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು 'ಈ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲ ರೈತ ಮಿತ್ರ ಹುದ್ದೆಗೆ ನೇಮಕಾತಿ ಮಾಡುವ ಆಶ್ವಾಸನೆ ಕೊಟ್ಟಿದ್ದು ಆ ಬಗ್ಗೆ ಯಾವುದೇ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವ ಕಾರಣ ಮಾನವ ಸರಪಳ ನಿರ್ಮಿಸಿ ತಮ್ಮ ತಮ್ಮ ಅಂಕಪಟ್ಟಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಕುಂದಗೋಳ ಪಟ್ಟಣದ ಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಬಳಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು ಶೀಘ್ರ ಕೃಷಿ ಇಲಾಖೆಯಲ್ಲಿನ ಕಾಯಕ ಮಿತ್ರ ಹುದ್ದೆ ಭರ್ತಿ ಮಾಡಿದಿದ್ದರೇ ಕೃಷಿ ಸಚಿವರು ನಿವಾಸದ ಎದುರು ಪಾಲಕರು ಸಮೇತ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
Kshetra Samachara
01/10/2021 12:28 pm