ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಟೈಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಹಾಗೂ ರೈತ ಮುಖಂಡರಿಂದ ಪ್ರತಿಭಟನೆ

ಕಲಘಟಗಿ: ಪಟ್ಟಣದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ರೈತರು ಭಾರತ ಬಂದ್‌ಗೆ ಬೆಂಬಲ ನೀಡಿ ಕಾರವಾರ ಹುಬ್ಬಳ್ಳಿಯ ಹೆದ್ದಾರಿಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು,ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಪಂಪ್ ಸೆಟ್ ಬಳಕೆದಾರರ ಸಂಘದ ಮುಖಂಡರು ಭಾರತ ಬಂದ್ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿ ಕೇಂದ್ರ ಸರಕಾರದ ಇಂಧನ ಬೆಲೆ ಏರಿಕೆ ಹಾಗೂ ಕೇಂದ್ರದ ಕೃಷಿ ಮಸೂದೆಗಳನ್ನು ರೈತ ವಿರೋಧಿ ನೀತಿಯನ್ನು ಖಂಡಿಸಿದರು.

ಕಾಂಗ್ರೆಸ್‌ ಮುಖಂಡರಾದ ಮಂಜುನಾಥ ಮುರಳ್ಳಿ ಮಾತನಾಡಿ,ರೈತ ವಿರೋಧಿ ಕಾನೂನು ಹಿಂದೆ ಪಡೆಯದೇ ಇದ್ದರೇ ಮುಂಬರುವ ದಿನಗಳಲ್ಲಿ ರೈತರು ಉಗ್ರವಾದ ಹೋರಾಟ ಮಾಡಲಿದ್ದಾರೆ ಹಾಗೂ ಇಂದನ ಬೆಲೆ ಗಗನಕ್ಕೆ ಏರಿಕೆಯಾಗಿ ಜನರಿಗೆ ಹೊರೆಯಾಗಿದೆ ಕಾರಣ ಇಂಧನ ಬೆಲೆ ಇಳಿಕೆ ಮಾಡ ಬೇಕು,ಮೂರು ಮಸೂದೆಗಳನ್ನು ಹಿಂದೆ ಪಡೆಯ ಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಿಜಗುಣಿ ಕೆಲಗೇರಿ,ಉಳವಪ್ಪ ಬಳಿಗೇರ,ಲಿಂಗರಡ್ಡಿ ನಡುವಿನಮನಿ,ವಸಂತ ಡಾಕಪ್ಪನವರ ಹಾಗೂ ರೈತರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

27/09/2021 06:57 pm

Cinque Terre

30.65 K

Cinque Terre

0

ಸಂಬಂಧಿತ ಸುದ್ದಿ