ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೇಂದ್ರ ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ರೈತ ಸಂಘಟನೆಗಳು

ಕುಂದಗೋಳ : ಕೇಂದ್ರ ಸರ್ಕಾರದ ಜಾರಿಗೆ ತಂದಿರುವ ಎಪಿಎಂಸಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸೇರಿದಂತೆ ತೈಲ ಬೆಲೆ, ಅಡಿಗೆ ಎಣ್ಣೆ ಸೇರಿದಂತೆ ದಿನಸಿ ವಸ್ತುಗಳು ಬೆಲೆ ಏರಿಸುತ್ತಿರುವ ಆಡಳಿತ ಧೋರಣೆ ಖಂಡಿಸಿ ರಾಜ್ಯ ಕೃಷಿಕ ಸಮಾಜ ಹಾಗೂ ಕಿಸಾನ್ ಕಾಂಗ್ರೆಸ್ ಘಟಕದ ವತಿಯಿಂದ ಕುಂದಗೋಳದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಾದಯಾತ್ರೆ ಮೂಲಕ ತಹಶೀಲ್ದಾರ ಕಚೇರಿ ತಲುಪಿದ ಕೃಷಿಕ ಸಮಾಜ ಹಾಗೂ ಕಿಸಾನ್ ಕಾಂಗ್ರೆಸ್ ಘಟಕದ ಕಾರ್ಯಕರ್ತರು ತಹಶೀಲ್ದಾರ ವಿ.ವಾಯ್.ಮುಳಗುಂದಮಠ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಂದಗೋಳ ತಾಲೂಕಿನ ಕಿಸಾನ್ ಕಾಂಗ್ರೆಸ್ ಘಟಕ ಹಾಗೂ ಕೃಷಿಕ ಸಮಾಜದ ಬಾಂಧವರು ರೈತರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

27/09/2021 03:02 pm

Cinque Terre

28.03 K

Cinque Terre

3

ಸಂಬಂಧಿತ ಸುದ್ದಿ