ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾರತ್ ಬಂದ್ ಹಿನ್ನೆಲೆ:ಚೆನ್ನಮ್ಮ ವೃತ್ತರಲ್ಲಿ ರೈತರು ಪೊಲೀಸರ ನಡುವೇ ಮಾತಿನ ಚಕಮಕಿ...!

ಹುಬ್ಬಳ್ಳಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ ಮೋರ್ಚಾ ಕರೆ ನೀಡಿರುವ ಬಂದ್ ಗೆ ಬೆಂಬಲಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು‌.

ನಗರದ ಚೆನ್ನಮ್ಮ ವೃತ್ತದಲ್ಲಿ ರಸ್ತೆಯ ಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು.‌ ಇದಲ್ಲದೇ ರಸ್ತೆ ಬಂದ್ ಮಾಡಿ ವಾಹನ ತಡೆಯಲು ರೈತರು ಮುಂದಾದಾಗ ಪೊಲೀಸರು ಹಾಗೂ ರೈತರ ನಡುವೇ ವಾಗ್ವಾದ ನಡೆಯಿತು‌‌. ಆಗ ಪೊಲೀಸರು ಹಾಗೂ ರೈತರ ನಡುವೇ ತಳ್ಳಾಟ ನೂಕಾಟ ನಡೆಯಿತು.

ಹೋರಾಟಗಾರಿಗೆ ವಾಹನ ತಡೆಯದಂತೆ ಪೊಲೀಸರು ಮನವಿ ಬಳಿಕ ಶಾಂತರೀತಿಯ ಪ್ರತಿಭಟನೆ ನಡೆಸಿದರು. ಇದೇ ವೇಳೆ ಆಮ್ ಆದ್ಮಿ ಪಕ್ಷವು ಕೂಡ ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿತು.‌ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನ ಕೈಬಿಡಬೇಕೆಂದು ಒತ್ತಾಯಿಸಿದರು.

Edited By : Manjunath H D
Kshetra Samachara

Kshetra Samachara

27/09/2021 01:01 pm

Cinque Terre

46.31 K

Cinque Terre

4

ಸಂಬಂಧಿತ ಸುದ್ದಿ