ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊನೆಗೂ ವಿನಯ್‌ ಕುಲಕರ್ಣಿಯನ್ನು ಭೇಟಿ ಮಾಡಲಿಲ್ಲ ಪರಮೇಶ್ವರ

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಭೇಟಿಯಾಗಲೆಂದು ಹೊರಟಿದ್ದ ಅವರ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ ಅವರು ಅರ್ಧ ದಾರಿಯಲ್ಲೇ ಅಸುನೀಗಿರುವ ಘಟನೆ ನಡೆದಿದೆ.

ಧಾರವಾಡ ತಾಲೂಕಿನ ಮರೇವಾಡ ಗ್ರಾಮದ ಪರಮೇಶ್ವರ ಗಾಣಿಗೇರ ಎಂಬಾತನೇ ಮೃತ ದುರ್ದೈವಿ.

ಧಾರವಾಡ ಜಿಲ್ಲೆಗೆ ಆಗಮಿಸದಂತೆ ನ್ಯಾಯಾಲಯ ವಿನಯ್ ಅವರಿಗೆ ಸೂಚನೆ ನೀಡಿದ್ದರಿಂದ ವಿನಯ್ ಅವರು ಇದೀಗ ಬೆಂಗಳೂರಿನಲ್ಲೇ ವಾಸ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಲೆಂದು ಪರಮೇಶ್ವರ ಗಾಣಿಗೇರ ಅವರು ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ತುಮಕೂರಿನ ಬಳಿ ಅವರಿಗೆ ಹೃದಯಾಘಾತವಾಗಿ ಅಸುನೀಗಿದ್ದಾರೆ.

ತಮ್ಮ ಬೆಂಬಲಿಗನ ಸಾವಿನ ಸುದ್ದಿ ಕೇಳಿ ಸ್ವತಃ ವಿನಯ್ ಅವರೇ ತುಮಕೂರಿಗೆ ಬಂದು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ತಾವೇ ಮುಂದೆ ನಿಂತು ಪಾರ್ಥೀವ ಶರೀರವನ್ನು ಮರೇವಾಡ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು.

Edited By : Shivu K
Kshetra Samachara

Kshetra Samachara

27/09/2021 10:09 am

Cinque Terre

33.2 K

Cinque Terre

12

ಸಂಬಂಧಿತ ಸುದ್ದಿ