ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿರುವ ಆಮ್ಲಜನಕ ಉತ್ಪಾದನಾ ಘಟಕ ಲೋಕಾರ್ಪಣೆ, 100 ಹಾಸಿಗೆಯ ಮಾಡ್ಯೂಲರ್ ಆಸ್ಪತ್ರೆ’ಯ ನಿರ್ಮಾಣ' ಕಾಮಗಾರಿಗೆ ಹಾಗೂ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದ ಲೋಕಾರ್ಪಣೆಗೆ ಚಾಲನೆ ನೀಡಿದರು.
ಅಲ್ಲದೇ ಇದೇ ಸಂದರ್ಭದಲ್ಲಿ ಸಖಿ ಒನ್ ಸ್ಪಾಪ್ ಸೆಂಟರ್ ಗೆ 5 ಆಧುನಿಕ ವೆಂಟಿಲೇಟರ್, ಆಮ್ಲಜನಕ ಸಂಗ್ರಹಣಾ ಘಟಕಗಳು, ಪಿಜಿಯೋಥೆರಪಿ ವಿಭಾಗ, 250 ಹಾಸಿಗಳ ಮೀಸಲು ಆಸ್ಪತ್ರೆ, ವೈದ್ಯಕೀಯ ಉಪಕರಣಗಳನ್ನು ಸಾರ್ವಜನಿಕರ ಸೇವೆಗೆ ಒದಗಿಸುವ ಗದಗ ವೈದ್ಯಕೀಯ ಸಂಸ್ಥೆಯಲ್ಲಿ ತಜ್ಞ ವಿಭಾಗದಲ್ಲಿ ಪೋಸ್ಟ್ ಪಿ.ಜಿ. ಫೆಲೊಷಿಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭೋದನಾ ಕೊಠಡಿಗಳು, ಮೆಡಿಕಲ್ ಮ್ಯೂಸಿಯಂ ಉದ್ಘಾಟನೆ, ಹಾಗೂ ಫೆಲೋಷಿಪ್ ಕೋರ್ಸ್‍ಗಳಿಗೆ ಲೋಕಾರ್ಪಣೆಗೊಳಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
Kshetra Samachara
26/09/2021 08:51 pm