ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಠಾಧೀಶರ ಸಭೆಯಲ್ಲಿ ಗದ್ದಲ ಗಲಾಟೆ..

ಧಾರವಾಡ: ಧಾರವಾಡದ ಲಿಂಗಾಯತ ಭವನದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ವಿವಿಧ ಮಠಾಧೀಶರ ಸಮಾವೇಶದಲ್ಲಿ ಗಲಾಟೆ, ಗೊಂದಲ ಉಂಟಾದ ಘಟನೆ ನಡೆದಿದೆ.

ಪ್ರಸ್ತುತ ದಿನಮಾನದಲ್ಲಿ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಕುರಿತು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ 108 ವಿವಿಧ ಮಠಾಧೀಶರ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ, ಜಯಮೃತ್ಯುಂಜಯ ಸ್ವಾಮೀಜಿಗಳು ನಡೆಸುತ್ತಿರುವ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಹೋರಾಟಕ್ಕೆ ಬೆಂಬಲಿಸುವ ವಿಚಾರ ಬಂದಾಗ ಸಭೆಯಲ್ಲಿ ಗದ್ದಲವೇ ಆರಂಭವಾಯಿತು.

ಲಿಂಗರಾಜ ಕಮತರ ಎನ್ನುವವರು ಕೂಡಲ ಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿಗಳು ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕೊಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಎಲ್ಲ ಮಠಾಧೀಶರು ಬೆಂಬಲ ಸೂಚಿಸಬೇಕು ಎಂದರು. ಈ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಮುಖಂಡರೊಬ್ಬರು ಈ ವಿಷಯದ ಬಗ್ಗೆ ಈಗ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಉತ್ತರಿಸಿದ್ದೇ ಸಭೆಯಲ್ಲಿ ಗಲಾಟೆಗೆ ಕಾರಣವಾಯಿತು.

ಈ ಗಲಾಟೆಯಿಂದ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ಪರವಾಗಿದ್ದ ಕೆಲ ಪೀಠಾಧಿಪತಿಗಳು ಸಭಾತ್ಯಾಗ ಮಾಡಿದ ಪ್ರಸಂಗವೂ ಜರುಗಿತು. ಪರಿಸ್ಥಿತಿ ತಿಳಿಗೊಂಡ ನಂತರ ದಿಂಗಾಲೇಶ್ವರ ಸ್ವಾಮೀಜಿಗಳು, ನಾನೂ ಬಸವಜಯಮೃತ್ಯುಂಜಯ ಸ್ವಾಮೀಜಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇನೆ. ಯಾರೂ ಅನ್ಯತಾ ಭಾವಿಸಬಾರದು ಎಂದು ಸಮಜಾಯಿಷಿ ನೀಡಿದರು.

Edited By : Shivu K
Kshetra Samachara

Kshetra Samachara

20/09/2021 09:04 pm

Cinque Terre

100.47 K

Cinque Terre

2

ಸಂಬಂಧಿತ ಸುದ್ದಿ