ಹುಬ್ಬಳ್ಳಿ- ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದಿದ್ದು, ಬಿಜೆಪಿ 39 ಸ್ಥಾನ ಗಳಿಸಿ ಅಧಿಕಾರ ಹಿಡಿಯಲು ಮುಂದಾಗಿದೆ. ಈ ನಡುವೆ ಕಾಂಗ್ರೆಸ್ ತಾನು ಏನೂ ಕಡಿಮೆ ಇಲ್ಲವೆಂಬಂತೆ, ತೆರೆಮರೆಯಲ್ಲಿ ಆಪರೇಷನ್ ಕಾಂಗ್ರೆಸ್ ಗೆ ಮುಂದಾಗಿದ್ದು, ಇದೀಗ ಬಸವನ ಬಾಗೇವಾಡಿ ಕೈ ಶಾಸಕರೊಬ್ಬರು ಓಪನ್ ಆಗಿಯೇ, ಪಾಲಿಕೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸದಸ್ಯರಿಗೆ ಬಿಗ್ ಆಫರ್ ನೀಡಿದ್ದಾರೆ.
ಹೌದು, ಪಾಲಿಕೆ ಚುನಾವಣೆಯಲ್ಲಿ 33 ಸ್ಥಾನ ಗಳಿಸಿರುವ ಕಾಂಗ್ರೆಸ್, ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಏರಲು ಕನಿಷ್ಠ 45 ಸಂಖ್ಯಾಬಲ ಬೇಕು. ಈ ದಿಸೆಯಲ್ಲಿಯೇ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಕಾಂಗ್ರೆಸ್ ನೂತನ ಸದಸ್ಯರಿಗೆ ಬಿಗ್ ಆಫರ್ ನೀಡಿದ್ದು, ಯಾರು ಬಿಜೆಪಿಯ 10 ಸದಸ್ಯರನ್ನು ಪಕ್ಷಕ್ಕೆ ಕರೆ ತಂದವರಿಗೆ ಪಾಲಿಕೆಯ ಅಧ್ಯಕ್ಷ ಸ್ಥಾನ ಫೀಕ್ಸ್ ಎಂದು ಹೇಳುವ ಮೂಲಕ ಡೈರೆಕ್ಟ್ ಆಗಿ ಆಪರೇಷನ್ ಕೈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಯಸ್, ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದು ನಿನ್ನೇ ನಡೆದ ನೂತನ ಪಾಲಿಕೆ ಸದಸ್ಯರ ಸನ್ಮಾನ ಕಾರ್ಯಕ್ರಮ, ಮುಂದುವರೆದು ಮಾತನಾಡಿದ ಅವರು, ನಾನು ಬಿಜಾಪುರದಲ್ಲಿದ್ದಾಗ ನಗರ ಸಭೆ ಅಧ್ಯಕ್ಷ ಇದ್ದೆ, ನಾನು ಜನತಾದಳದಲ್ಲಿದ್ದಾಗ ಇಬ್ಬರೇ ಗೆಲುವು ಸಾಧಿಸಿದ್ವಿ, ಆದರೆ ಕಾಂಗ್ರೆಸ್ ನಿಂದ 24 ಜನರು ಗೆದ್ದಿದ್ದರು. ಆಗ ನಾನೇ ಅವರನ್ನು ಕರೆತಂದು ಅಧ್ಯಕ್ಷ ಆಗಿದ್ದೆ ಎಂದ ಅವರು, ಇಲ್ಲಿ ಸ್ವಲ್ಪ ಅಂತರದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಬಹುದು. ಪಾಲಿಕೆಯಲ್ಲಿ ಕಾಂಗ್ರೆಸ್ 33 ಸ್ಥಾನ ಗಳಿಸಿದೆ, ಇನ್ನೂ ಸಂಖ್ಯಾಬಲಕ್ಕೆ 10 ಸದಸ್ಯರ ಅವಶ್ಯಕತೆ ಇದ್ದು, ಈ ದಿಸೆಯಲ್ಲಿ ಯಾರಾದರೂ ಮನಸ್ಸು ಮಾಡಿದ್ರೆ ಇವತ್ತೆ ಅಧ್ಯಕ್ಷ ಎಂದು ಘೋಷಣೆ ಮಾಡುತ್ತೇವೆ ಎಂದು ಪರೋಕ್ಷವಾಗಿಯೇ ಆಪರೇಷನ್ ಕೈ ಮಾಡುವಂತೆ ತಿಳಿಸಿದ್ದಾರೆ.
Kshetra Samachara
13/09/2021 03:58 pm