ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹು-ಧಾ ಪಾಲಿಕೆ ಚುನಾವಣೆಯಲ್ಲಿ ಮತದಾನ ಕಡಿಮೆ ಆಗೋದಕ್ಕೆ ಬಿಜೆಪಿಯ ದುರಾಡಳಿತವೇ ಕಾರಣ! ಧೃವ ನಾರಾಯಣ ಆರೋಪ

ಹುಬ್ಬಳ್ಳಿ- ಇತ್ತೀಚಿಗೆ ನಡೆದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ, ಮತದಾನದ ಪ್ರಮಾಣ ಕಡಿಮೆ ಆಗೋದಕ್ಕೆ ಬಿಜೆಪಿಯ ದುರಾಡಳಿತವೇ ಕಾರಣ ಎಂದು, ಕೆಪಿಸಿಸಿ ಕಾರ್ಯಧ್ಯಕ್ಷ ಧೃವ ನಾರಾಯಣ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಇಲ್ಲಿನ ಮತದಾರರಿಗೆ ಸರ್ಕಾರದ ಮೇಲೆ ಭರವಸೆಯೆ ಮಾಯವಾಗಿದೆ. ಬಿಜೆಪಿಯ ಆಡಳಿತ ಕುಂಟಿತವಾಗಿದ್ದರಿಂದಲೇ ಮತದಾರರು ಮತದಾನ ಮಾಡಲು ಒಲವು ತೋರಲಿಲ್ಲ ಎಂದು ದೂರಿದರು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಳೆದ 20 ವರ್ಷಗಳಿಂದ ಪ್ರಹ್ಲಾದ್ ಜೋಶಿ ಆಯ್ಕೆಯಾಗಿದ್ದಾರೆ, ಆದರೆ ಅವರಿಂದ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಜೊತೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಭಾವಿ ಮುಖ್ಯಮಂತ್ರಿ ಎಂದೇ ಗುರುತಿಸಿಕೊಂಡಿದ್ದ ಅರವಿಂದ್ ಬೆಲ್ಲದ ಇದ್ರೂ ಕೂಡ ಬಿಜೆಪಿಯ ಯಾವ ನಾಯಕರು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ದೂರಿದರು.

ಹು-ಧಾ ಪಾಲಿಕೆಯಲ್ಲಿ ನಮ್ಮ ಪಕ್ಷದಿಂದ ಕೆಲ ತಪ್ಪುಗಳಾಗಿವೆ ಇದರಿಂದಾಗಿ ನಮಗೂ ಸ್ವಲ್ಪ ಹಿನ್ನೆಡೆಯಾಗಿದೆ. ಆದರೆ ನಮ್ಮ ಪಕ್ಷದ ನಾಯಕರು ಪಾಲಿಕೆಯ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು 33 ಸ್ಥಾನ ಗೆಲ್ಲುವಂತೆ ಮಾಡಿದ್ದಾರೆ. ಇನ್ನೂ ವಿನಯ ಕುಲಕರ್ಣಿ ಧಾರವಾಡದಲ್ಲಿ ಇರದೇ ಇದ್ದರೂ ಸಹ ಅವರ ಬೆಂಬಲಿಗರು ಉತ್ತಮವಾಗಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Edited By : Nagesh Gaonkar
Kshetra Samachara

Kshetra Samachara

12/09/2021 03:43 pm

Cinque Terre

62.84 K

Cinque Terre

9

ಸಂಬಂಧಿತ ಸುದ್ದಿ