ಅಣ್ಣಿಗೇರಿ : ಪಟ್ಟಣದ ಅಂಬಿಗೇರಿ ಕ್ರಾಸ್ ನಲ್ಲಿ ನಡೆದ ಘಟನೆ ವಿವರಣೆ ಪಡೆಯಲು ಜಿಲ್ಲಾಧಿಕಾರಿ ಖುದ್ದಾಗಿ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರ ಬೇಡಿಕೆಯಾಗಿದೆ. ಹೌದು...ಪಟ್ಟಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಘಟನೆ ಕುರಿತು ತನಿಖೆ ಕೈಗೊಳ್ಳಲು ಜಿಲ್ಲಾ ಹಂತದ ಅಧಿಕಾರಿಗಳು ಬರಬೇಕು, ಇಲ್ಲವಾದರೆ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರ ಕೂಗು ಕೇಳಿ ಬರುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಬರಬೇಕು ಇಲ್ಲವಾದರೆ ನಮ್ಮ ಪ್ರತಿಭಟನೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ಪದಾಧಿಕಾರಿಗಳು ಹೇಳಿದರು.
Kshetra Samachara
10/09/2021 09:58 pm