ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹೆಸರು ಉದ್ದು ಖರೀದಿ ಕೇಂದ್ರ ಆರಂಭ, ರೈತರ ಕಷ್ಟ ಗೊತ್ತು ಎಂದ ಸಚಿವರು

ಕುಂದಗೋಳ : ನಾನು ಒಬ್ಬ ರೈತರ ಮಗ ನನಗೂ ಜಮೀನಿದೆ ರೈತರ ಕಷ್ಟ ನನಗೆ ಅರ್ಥವಾಗಿದೆ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು ಬೆಳೆದ ರೈತರಿಗೆ ಹೆಸರಿಗೆ ಕ್ವಿಂಟಾಲ್'ಗೆ 7225 ರೂಪಾಯಿ ಹಾಗೂ ಉದ್ದಿಗೆ 6300 ರೂಪಾಯಿ ನೀಡಿ ಖರೀದಿ ಕೇಂದ್ರ ತೆರೆಯಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಇಲಾಖೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಅವರು ಇತ್ತಿಚೆಗೆ ಕುಂದಗೋಳ ಪಟ್ಟಣದ ಎಪಿಎಂಸಿ ಕೇಂದ್ರದಲ್ಲಿ ನೂತನವಾಗಿ ಆರಂಭವಾದ ಬೆಂಬಲ ಬೆಲೆ ಯೋಜನೆಯ ಹೆಸರು ಉದ್ದು ಖರೀದಿ ಕೇಂದ್ರದ ತೂಕದ ಯಂತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್ ಕಾಮಗಾರಿ ಆರಂಭವಾಗಿದೆ. ಅದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ. ಈ ವಿಚಾರವನ್ನು ಕೇಂದ್ರ ಸಚಿವರು ನಿಮಗೆ ತಿಳಿಸಿದ್ದಾರೆ ಎಂದರು.

ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ ಇಲ್ಲಿನ ರೈತರ ಕಷ್ಟ ತಿಳಿದು ಮೇಲಿಂದ ಮೇಲೆ ಸರ್ಕಾರ ಮನವಿ ಮಾಡಿದ ಫಲವೇ ಇಂದು ಹೆಸರು ಉದ್ದು ಖರೀದಿ ಕೇಂದ್ರ ಆರಂಭವಾಗಲು ಕಾರಣವಾಯ್ತು ಇದಕ್ಕೆ ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೆ ಧನ್ಯವಾದ ಎಂದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಜಿಲ್ಲಾ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಬಿಜೆಪಿ ಮುಖಂಡ ಎಂ.ಆರ್.ಪಾಟೀಲ, ಮುಖಂಡ ಎ.ಬಿ.ಉಪ್ಪಿನ್ ಇತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

08/09/2021 02:31 pm

Cinque Terre

32.67 K

Cinque Terre

0

ಸಂಬಂಧಿತ ಸುದ್ದಿ