ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯರ ಸಮಸ್ಯೆಗೆ ಸ್ಪಂದಿಸುತ್ತಿದೆ ಪರಿಸರ ಸ್ನೇಹಿ ಮುಟ್ಟಿನ ಕಪ್...!

ಹುಬ್ಬಳ್ಳಿ: ಮುಟ್ಟಿನ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಪ್ಯಾಡ್ ಗಳು ಮೊರೆ ಹೋಗುವುದೇ ಹೆಚ್ಚು. ಸಮಯಕ್ಕೆ ಸರಿಯಾಗಿ ಪ್ಯಾಡ್ ಗಳ ಬದಲಾಯಿಸದಿದ್ದರೆ, ಸೋರಿಕೆಯಿಂದ ಕೆಲಮೊಮ್ಮೆ ಕಿರಿಕಿರಿಯಾಗುವುದು ಸಹಜ. ಅಲ್ಲದೇ, ಈ ಪ್ಯಾಡ್ ಗಳ ವಿಲೇವಾರಿ ಕೂಡಾ ತುಸು ಕಷ್ಟ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಅನುಕೂಲವಾಗುವಂತೆ ಪರಿಸರ ಸ್ನೇಹಿ ಮುಟ್ಟಿನ ಕಪ್ ಗಳನ್ನು ಬಳಸುವುದು ಉತ್ತಮ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಇಂದಿರಾ ಎಂಟರ್ ಪ್ರೈಸಸ್ ಹಾಗೂ ಸೆಂಟ್ ಅಂಥೋನಿ ಪಬ್ಲಿಕ್ ಶಾಲೆ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರದ ಜೊತೆಗೂಡಿ ನೂತನ ಉತ್ಪನ್ನವನ್ನು ಬಿಡುಗಡೆ ಮಾಡುತ್ತಿದೆ.

ಹೌದು.. ಇಲ್ಲಿನ ಸಿದ್ದೇಶ್ವರ ಪಾರ್ಕ್ ನಲ್ಲಿನ ಸೆಂಟ್ ಆಂಥೋನಿ ಪಬ್ಲಿಕ್‌ ಸ್ಕೂಲ್ ನಲ್ಲಿ ಉತ್ಪನ್ನಕ್ಕೆ ಚಾಲನೆ ನೀಡಲಾಯಿತು. ಮುಟ್ಟಿನ ಸಮಯದಲ್ಲಿ ಪ್ರತಿಯೊಂದು ಹೆಣ್ಣು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಬಹುಶಃ ಮುಟ್ಟಿನ ಸಮಯ ಒಂದನ್ನು ಬಿಟ್ಟು ಇನ್ನೆಲ್ಲಾ ಸಮಯದಲ್ಲಿ ಮಹಿಳೆಯು ಯಾವುದೇ ಹಿಂಜರಿಕೆಯಿಲ್ಲದೇ ಎಲ್ಲವನ್ನು ನಿಭಾಯಿಸುತ್ತಾಳೆ. ಮುಟ್ಟಿನ ಸಮಯದಲ್ಲಿ ಆಗುವಂತಹ ಮಾನಸಿಕ ಬದಲಾವಣೆಗಳು ಮಹಿಳೆಯರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಪ್ಯಾಡ್​ಗಳ ಬದಲಾಯಿಸದಿದ್ದರೆ, ಸೋರಿಕೆಯಿಂದ ಕೆಲವೊಮ್ಮೆ ಕಿರಿಕಿರಿಯಾಗುವುದು ಸಹಜ. ಅಲ್ಲದೇ, ಈ ಪ್ಯಾಡ್​ಗಳ ವಿಲೇವಾರಿ ಕೂಡ ತುಸು ಕಷ್ಟ. ಮಣ್ಣಿನಲ್ಲಿ ಕರಗಲು ಈ ಪ್ಯಾಡ್​ಗಳು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕಾಗಿ ಪಾಡ್ ಹ್ಯುಮೆನ ಕೇರ್ ಮುಟ್ಟಿನ ಕಪ್ ನ್ನು ಬಿಡುಗಡೆ ಮಾಡಲಾಗುತ್ತಿದೆ.

ಮುಟ್ಟಿನ ಕಪ್​ ಬಗ್ಗೆ ಬಹಳಷ್ಟು ಮಹಿಳೆಯರಲ್ಲಿ ತಿಳುವಳಿಕೆ ಕೊರತೆ ಕಾರಣದಿಂದ ಇದರ ಬಳಕೆಗೆ ಹಿಂದೇಟು ಹಾಕುತ್ತಾರೆ. ಅಲ್ಲದೇ ಕೆಲವೊಂದು ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಋತು ಚಕ್ರದ ನಿರ್ವಹಣೆ ಬಗ್ಗೆ ಹೆಚ್ಚಿನ ನಿಷ್ಕಾಳಜಿ ಇರುವುದನ್ನು ನಾವು ಕಂಡಿದ್ದೇವೆ. ಮಹಿಳೆಯರಿಗೆ ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಹಾಗೂ ಉಚಿತ ಕಪ್ ಅಭಿಯಾನದ ಮೂಲಕ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ.

ಇನ್ನೂ ಮುಟ್ಟಿನ ಕಪ್ ತಮ್ಮ ಯೋನಿಗೆ ಹಾನಿಯನ್ನುಂಟು ಮಾಡಬಹುದು ಎಂಬ ತಪ್ಪು ಕಲ್ಪನೆ ಕೂಡ ಹಲವರಲ್ಲಿದೆ. ಅಲ್ಲದೇ, ಇದು ತಮ್ಮ ಕನ್ಯತ್ವಕ್ಕೆ ತೊಡಕು ಆಗಬಹುದು ಎಂಬ ನಂಬಿಕೆ ಕೂಡ ಹಲವರಲ್ಲಿದೆ. ಇದೇ ಹಿನ್ನಲೆ ಇಂದಿಗೂ ಇದರ ಬಳಕೆಗೆ ಅನೇಕರು ಮುಂದಾಗಿಲ್ಲ. ಆದರೆ, ಈ ಮುಟ್ಟಿನ ಕಪ್​ ಗಳು ಆರೋಗ್ಯ , ಪರಿಸತ ಸ್ನೇಹಿಯಾಗಿದೆ. ಜೊತೆಗೆ ಇವು ಕನ್ಯತ್ವಕ್ಕೆ ಮಾರಕವಲ್ಲ ಈ ಬಗ್ಗೆ ಕೆಲವು ಅರಿವು ಅಗತ್ಯ. ಮುಟ್ಟಿನ ಕಪ್​ಗಳು ಪರಿಸರ ಸ್ನೇಹಿ ಜೊತೆಗೆ ಪ್ಯಾಡ್​ಗೆ ಹೋಲಿಸಿದರೆ ಖರ್ಚಿನಲ್ಲಿಯೂ ಉಳಿತಾಯ ಮಾಡುತ್ತವೆ. ಅಲ್ಲದೇ ಇದು ದೀರ್ಘಕಾಲದವರೆಗೆ ಯಾವುದೇ ಅಳುಕಿಲ್ಲದೆ ಬಳಸಬಹುದಾಗಿದೆ. ವಾಸನೆ ರಹಿತವಾದ ಇವು, ಪ್ಯಾಡ್​ನಿಂದ ಉಂಟಾಗುವ ಟಾಕ್ಸಿಕ್​ ಶಾಕ್​ ಸಿಂಡ್ರೋಮ್​ ನಂತಹ ಅಪಾಯ ತಡೆಯುವಲ್ಲಿ ಕೂಡ ಸಹಾಯ ಮಾಡುತ್ತದೆ.‌

Edited By : Nagesh Gaonkar
Kshetra Samachara

Kshetra Samachara

04/09/2021 03:13 pm

Cinque Terre

62.66 K

Cinque Terre

6

ಸಂಬಂಧಿತ ಸುದ್ದಿ