ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಂಜೀವಿನಿ ಯೋಜನೆ ಮಹಿಳಾ ಸಾಧಕರಿಗೆ ಸನ್ಮಾನ

ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಅಗಡಿ ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ, ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಯೋಜನೆ ಮಹಿಳಾ ಸ್ವ-ಸಹಾಯ ಮತ್ತು ಸ್ತ್ರೀ ಶಕ್ತಿ ಗುಂಪು ಒಕ್ಕೂಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಇಲ್ಲಿ ಗ್ರಾಮದ ಸ್ವ-ಸಹಾಯ ಸಂಘದ ಮಹಿಳೆಯರು, ಗ್ರಾಮ ಪಂಚಾಯತಿ ಕಾರ್ಯಾಲಯದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಹಿಳಾ ಒಕ್ಕೂಟ ಸಂಘದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಅಗಡಿ, ಪಾಲಿಕೊಪ್ಪ ಹಾಗೂ ತಿರ್ಮಲಕೊಪ್ಪ ಗ್ರಾಮಗಳ ವಾರ್ಡ್ ಒಕ್ಕೂಟದ ಮಹಿಳಾ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಅಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ ಸಂಗಣ್ಣನವರು ಹಾಗೂ ವ- ಸಿಬ್ಬಂದಿ ವರ್ಗ, ಮುಖ್ಯ ಅಥಿತಿಯಾಗಿ ಆಗಮಿಸಿದ ತಾಲ್ಲೂಕು ಪಂಚಾಯತ NRLM ಸಿಬ್ಬಂದಿಯಾದ ಸುಮಗಂಲ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪಾರ್ವತಿ ಪಾಟೀಲ, ಮಹಿಳಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿ 1098 ಸಂಯೋಜಕರಾದ ಎನ್.ಬಿ. ಹೊಸಮನಿ ಇದ್ದರು.

ಸಂಘ ಸಂಸ್ಥೆಗಳು ಮಹಿಳೆಯರ ಏಳಿಗೆಗೆ ತುಂಬಾ ಸಹಾಯಕವಾಗಿವೆ. ಮಹಿಳೆಯರು ಯಾವುದರಲ್ಲಿ ಕಡಿಮೆ ಇಲ್ಲ, ಎಲ್ಲ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಎಂದು ಮಹಾದೇವಿ ನಾಯ್ಕರ್ ಮಾತನಾಡಿದರು.

Edited By : Shivu K
Kshetra Samachara

Kshetra Samachara

03/09/2021 02:41 pm

Cinque Terre

33.69 K

Cinque Terre

0

ಸಂಬಂಧಿತ ಸುದ್ದಿ