ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮತದಾರರ ಶಿಪ್ಟ್ ಬಿಜೆಪಿ ತಂತ್ರ: ಶಾಸಕ ಅಬ್ಬಯ್ಯ ಗಂಭೀರ ಆರೋಪ...!

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆ ಮತದಾನ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವಾರ್ಡ್ ನಂಬರ್ 61 ರಲ್ಲಿ ಮತದಾರರ ಶಿಫ್ಟ್ ಮಾಡಲಾಗಿದೆ. ಹೆಚ್ಚು ಕಾಂಗ್ರೆಸ್ ಮತದಾರ ಇರುವ ಮತದಾರರನ್ನ ಶಿಫ್ಟ್ ಮಾಡಲಾಗಿದೆ. ಜಿಲ್ಲಾಡಳಿತ ಮೊದಲ ಲಿಸ್ಟ್ ನಲ್ಲಿ ಸರಿಯಾದ ಪಟ್ಟಿ ಪ್ರಕಟ ಮಾಡಿದೆ. ಆದರೆ ಎರಡನೇ ಪಟ್ಟಿಯಲ್ಲಿ ಶಿಫ್ಟ್ ಮಾಡಲಾಗಿದ್ದು, ಬಿಜೆಪಿ ಗೆ ಸೋಲಿನ ಭಯ ಕಾಡುತ್ತಿದೆ. ಮರುವಿಂಗಂಡನೆ ಮಾಡಿದ್ದು ಇದಕ್ಕೆಲ್ಲ ಕಾರಣವಾಗಿದೆ. ಈಗ ನಾನು ಸಹ ಡಿಸಿ ಜೊತೆ ಮಾತನಾಡಿದ್ದೇನೆ. ಅವರು ಕೂಡಲೇ ಕ್ರಮ ಕೈಗೊಳ್ಳುತ್ತೇನೆ ಅಂತ ಭರವಸೆ ನೀಡಿದ್ದಾರೆ ಎಂದರು.

ಶಿಫ್ಟಿಂಗ್ ಆಗಿದ್ದರಿಂದ ಮತ್ತೆ ಸಮಸ್ಯೆ ಆಗಲಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಅವರು ಹೇಳಿದರು.

Edited By : Shivu K
Kshetra Samachara

Kshetra Samachara

03/09/2021 12:47 pm

Cinque Terre

29.16 K

Cinque Terre

8

ಸಂಬಂಧಿತ ಸುದ್ದಿ