ಹುಬ್ಬಳ್ಳಿ: ಸೆಪ್ಟೆಂಬರ್ 3 ರಂದು ನಡೆಯುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಚುನಾವಣೆಗೆ ಸಕಲ ಸಿದ್ಧತೆ ಕೈಗೊಂಡಿರೋ ಹು-ಧಾ ಮಹಾನಗರ ಪಾಲಿಕೆ, ಹಾಗೂ ಜಿಲ್ಲಾಡಳಿತ ನಗರದ ಲ್ಯಾಮಿಂಗ್ಟನ್ ಶಾಲಾ ಆವರಣದಲ್ಲಿ ಮಸ್ಟರಿಂಗ್ ಕಾರ್ಯ ಸಿದ್ಧತೆಯನ್ನು ನಡೆಸಿದೆ.
ಹುಬ್ಬಳ್ಳಿ ಧಾರವಾಡದಾದ್ಯಂತ 842 ಮತಗಟ್ಟೆಗಳ ಸ್ಥಾಪನೆ ಮಾಡಿದ್ದು, ಪ್ರತಿಯೊಂದು ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ 8 ಜನರಂತೆ 8 ಸಾವಿರಕ್ಕೂ ಅಧಿಕ ಸಿಬ್ಬಂಧಿ ನಿಯೋಜನೆ ಮಾಡಿದ್ದಾರೆ. ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಮಸ್ಟರಿಂಗ್ ಕಾರ್ಯಕ್ಕೆ ಸಿದ್ಧತೆ ನಡೆದಿದ್ದು, ಚುನಾವಣಾ ಅಧಿಕಾರಿಗಳು ಮತಗಟ್ಟೆಗಳಿಗೆ ಮತಯಂತ್ರಗಳನ್ನ ಕೊಂಡೊಯ್ಯುತ್ತಿದ್ದಾರೆ.
Kshetra Samachara
02/09/2021 11:52 am