ಹುಬ್ಬಳ್ಳಿ : ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ 68ರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿರಂಜನಯ್ಯ ಹಿರೇಮಠ ಸ್ಪರ್ಧೆ ಮಾಡಿದ್ದು, ಈಗಾಗಲೇ ಶಾಸಕ ಪ್ರಸಾದ್ ಅಬ್ಬಯ್ಯನವರ ಮಾರ್ಗದರ್ಶನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಿ ಅವುಗಳನ್ನು ಮುಂದುವರೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೂಲಕ ಮಹಾನಗರ ಪಾಲಿಕೆ ಚುನಾವಣೆಗೆ ಧುಮುಕಿದ ನಿರಂಜನಯ್ಯ ಹಿರೇಮಠ ಅವರು ಕ್ರಮ ಸಂಖ್ಯೆ ಎರಡರ ಹಸ್ತದ ಗುರುತಿಗೆ ಮತ ಚಲಾಯಿಸುವಂತೆ ವಾರ್ಡ್ ನಂಬರ್ 68ರ ಜನತೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
01/09/2021 07:52 pm