ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕಪಟವಿಲ್ಲದ ಕಪಟಕರ ಅವರಿಗೆ ಲಭಿಸಲಿದೆ ಸಂʼಜಯʼ

ಧಾರವಾಡ: ಸಂಜಯ ಕಪಟಕರ... ಬಿಜೆಪಿ ಪಕ್ಷದ ಕಟ್ಟಾ ಕಾರ್ಯಕರ್ತ. ಎರಡು ಬಾರಿಗೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ಅಸಂಖ್ಯ. ಹಳೆಯ 14ನೇ ವಾರ್ಡಿನಿಂದ ಚುನಾವಣಾ ಕಣಕ್ಕಿಳಿದಿದ್ದ ಸಂಜಯ ಕಪಟಕರ ಮಾಳಮಡ್ಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದರು. ಹೀಗಾಗಿಯೇ ಆ ವಾರ್ಡು ಬಿಜೆಪಿ ಭದ್ರಕೋಟೆ ಎನ್ನಲಾಗುತ್ತದೆ. ಇದೀಗ ಸಂಜಯ ಕಪಟಕರ ಅವರು ಆ ವಾರ್ಡ್‌ ಬಿಟ್ಟು ಬೇರೆ ವಾರ್ಡ್‌ನ್ನೂ ಅಭಿವೃದ್ಧಿ ಮಾಡಬೇಕು ಎನ್ನುವ ಉದ್ದೇಶದಿಂದ ಇದೀಗ ವಾರ್ಡ್‌ ನಂಬರ್‌ 23ರಿಂದ ಚುನಾವಣಾ ಕಣಕ್ಕಿಳಿದಿದ್ದಾರೆ. ಸದ್ಯ ಕಪಟಕರ ಅವರ ಪರವಾಗಿ ಜಯಘೋಷ ಮೊಳಗುತ್ತಿದ್ದು, ಅವರ ಗೆಲುವು ಪಕ್ಕಾ ಎಂದೇ ಹೇಳಲಾಗುತ್ತಿದೆ.

ಮಿಚಿಗನ್‌ ಕಂಪೌಂಡ್‌ ಒಳರಸ್ತೆ, ಮಿಚಿಗನ್‌ ಕಂಪೌಂಡ್‌ ಉದ್ಯಾನವನ, ಪವನ ನಗರಿ, ಸಿಐಟಿಬಿ ಪ್ಲಾಟ್‌ ಒಳರಸ್ತೆಗಳು, ಸಿಐಟಿಬಿ ಉದ್ಯಾನವನ ಕಾಮಗಾರಿ, ಸದಾಶಿವ ನಗರ ಒಳರಸ್ತೆಗಳು, ಮನೆ ಮನೆಗೆ ಕಸ ವಿಲೇವಾರಿ ವಾಹನ ಸೌಲಭ್ಯ, ಮಿಚಿಗನ್‌ ಕಂಪೌಂಡ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಹೆಡ್‌ಪೋಸ್ಟ್‌ ಆಫೀಸಿನಿಂದ ರೈಲ್ವೆ ಸ್ಟೇಷನ್‌ವರೆಗೆ ನಾಗರಿಕರಿಗೆ ಉಚಿತ ವೈಫೈ ಸೌಲಭ್ಯ, ಜಯನಗರ ಸುತ್ತಮುತ್ತಲಿನ ನಾಗರಿಕರಿಗೆ ಉಚಿತ ವೈಫೈ ಸೌಲಭ್ಯ, ಜಯನಗರದಲ್ಲಿ ಗ್ರಂಥಾಲಯ ಸ್ಥಾಪನೆ ಸೇರಿದಂತೆ ಹಳೆಯ ವಾರ್ಡ್‌ ನಂಬರ್‌ 14ರಲ್ಲಿ ಸಂಜಯ ಅವರು ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟಿವೆ. ಈಗ ವಾರ್ಡ್‌ ನಂಬರ್‌ 23 ರಿಂದ ಕಣಕ್ಕಿಳಿದಿರುವ ಕಪಟಕರ ಅವರು, ಈ ವಾರ್ಡ್‌ನ್ನೂ ಕೂಡ ಸ್ಮಾರ್ಟ್‌ ವಾರ್ಡ್‌ನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ. ಸಂಜಯ ಅವರು ಬಿಜೆಪಿಯ ಹಿರಿಯ ನಾಯಕರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್‌, ಶಾಸಕರಾದ ಅರವಿಂದ ಬೆಲ್ಲದ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸದ್ಯ ತಾವು ಸ್ಪರ್ಧಿಸಿರುವ ವಾರ್ಡ್‌ ನಂಬರ್‌ 23ರಲ್ಲಿ ಏನೆಲ್ಲ ಕಾರ್ಯಗಳನ್ನು ಮಾಡಬೇಕೆಂದುಕೊಂಡಿದ್ದಾರೆ ಎಂಬುದನ್ನು ಸ್ವತಃ ಸಂಜಯ ಅವರೇ ಹೇಳುತ್ತಾರೆ ಕೇಳಿ

ವಾರ್ಡ್‌ ನಂಬರ್‌ 23ರಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲು ಒಬ್ಬ ಸಮರ್ಥ ನಾಯಕ ಬೇಕಾಗಿದ್ದು, ಆ ನಾಯಕತ್ವ ಸಂಜಯ ಕಪಟಕರ ಅವರಲ್ಲಿದೆ ಎಂಬುದು ಆ ವಾರ್ಡಿನ ಜನರ ಅಭಿಪ್ರಾಯ. ಹೀಗಾಗಿ ಸಂಜಯ ಅವರನ್ನು ತಮ್ಮ ವಾರ್ಡಿಗೆ ಕರೆದುಕೊಂಡು ಬಂದಿರೋದಾಗಿ ಅಲ್ಲಿನ ಜನರೇ ಹೇಳುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಪಾಲಿಕೆ ಸದಸ್ಯರಾಗಿರುವ ಸಂಜಯ ಅವರಿಗೆ ಸಾಕಷ್ಟು ಅನುಭವವಿದೆ. ಆ ಅನುಭವದ ಮೂಲಕ ವಾರ್ಡ್‌ನ್ನು ಸ್ಮಾರ್ಟ್‌ ವಾರ್ಡ್‌ ಮಾಡಲಿದ್ದಾರೆ ಎಂಬುದು ಅಲ್ಲಿನ ಜನರ ಅಭಿಪ್ರಾಯವಾಗಿದೆ.

ಸದ್ಯ ವಾರ್ಡ್‌ ನಂಬರ್‌ 23ರಿಂದ ಚುನಾವಣಾ ಕಣಕ್ಕಿಳಿದಿರುವ ಕಪಟಕರ ಅವರಿಗೆ, ಈ ಹಿಂದೆ ತಾವು ಮಾಡಿದ್ದ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಲಿವೆ. ಹಳೆದ ವಾರ್ಡ್‌ ನಂಬರ್‌ 14ರಲ್ಲಿ ಇವರು ಮಾಡಿರುವ ಕೆಲಸಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿದುಕೊಂಡಿವೆ. ಹೀಗಾಗಿಯೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 23ನೇ ವಾರ್ಡಿನ ಜನತೆ ಕೂಡ ಇವರಿಗೆ ಬೆಂಬಲ ಸೂಚಿಸಿದ್ದಾರೆ. ಸಾಕಷ್ಟು ಕ್ರಿಯಾಶೀಲರಾಗಿರುವ ಸಂಜಯ ಅವರು ಸಾಕಷ್ಟು ವಿಚಾರಗಳನ್ನಿಟ್ಟುಕೊಂಡು ರಾಜಕೀಯಕ್ಕೆ ಧುಮಿಕಿರುವ ಇವರ ಗೆಲುವು ನಿಶ್ಚಿತ ಎನ್ನಲಾಗುತ್ತಿದೆ.

ಹತ್ತು ಹಲವಾರು ಅಭಿವೃದ್ಧಿಪರ ವಿಚಾರಗಳನ್ನಿಟ್ಟುಕೊಂಡು ಮೂರನೇ ಬಾರಿಗೆ ಸಂಜಯ ಕಪಟಕರ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಗಾಗಲೇ ಹಳೆಯ ವಾರ್ಡ್‌ ನಂಬರ್‌ 14ನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿರುವ ಸಂಜಯ ಅವರಿಗೆ ಇಲ್ಲಿಯೂ ಯಶಸ್ಸು ಲಭಿಸಿ ಈ ವಾರ್ಡ್‌ನ್ನೂ ಕೂಡ ಸ್ಮಾರ್ಟ್‌ ವಾರ್ಡ್‌ನ್ನಾಗಿ ಪರಿವರ್ತನೆ ಮಾಡಲಿ ಎಂಬುದು ಅಲ್ಲಿನ ನಿವಾಸಿಗಳ ಆಶಯವಾಗಿದೆ. ಏನೇ ಆಗಲಿ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಮತ್ತು ಸಹನಾ ಗುಣ ಹೊಂದಿರುವ ಸಂಜಯ ಅವರಿಗೆ ಜಯ ಲಭಿಸಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂಬುದು ವಾರ್ಡ್‌ 23ರ ನಿವಾಸಿಗಳ ಆಶಯವಾಗಿದೆ.

Edited By : Manjunath H D
Kshetra Samachara

Kshetra Samachara

01/09/2021 01:27 pm

Cinque Terre

55.73 K

Cinque Terre

5

ಸಂಬಂಧಿತ ಸುದ್ದಿ