ಹುಬ್ಬಳ್ಳಿ: ಅವರು ಮಕ್ಕಳಲ್ಲಿ ರಾಷ್ಟ್ರಾಭಿಮಾನ ಮೂಡಿಸಿದವರು, ದೇಶದ ಭಾವಿ ಪ್ರಜೆಗಳಾದ ಮಕ್ಕಳ ತಪ್ಪುಗಳನ್ನು ತಿದ್ದಿ ತೀಡಿ ಸರಿದಾರಿಗೆ ತರಲು ಶ್ರಮಿಸಿದವರು, ಶಿಕ್ಷಣ ಕ್ಷೇತ್ರದಲ್ಲಿ 16 ವರ್ಷ ಸೇವೆ ಸಲ್ಲಿಸಿ ಇದೀಗ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಮಹದಾಸೆ ಹೊತ್ತು, ಸಮಾಜ ಸೇವೆಗೆ ಇವರು ಮುಂದಾಗಿದ್ದಾರೆ.
ವಾರ್ಡ್ ಜನರ ವಿಶ್ವಾಸ ಗೆದ್ದು ಹೊಸ ಭರವಸೆ ಮೂಡಿಸಿ, ಇದೀಗ ಮಹಾನಗರ ಪಾಲಿಕೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ ಅಷ್ಟಕ್ಕೂ ಅವರು ಯಾರು, ಅವರ ಭರವಸೆ ಏನು ಅಂತೀರಾ ಈ ಸ್ಟೋರಿ ನೋಡಿ...
ಹೀಗೆ ಜನರಲ್ಲಿ ಹೊಸ ಭರವಸೆ ಮೂಡಿಸಿ ರಾಜಕೀಯ ಕ್ಷೇತ್ರದಲ್ಲಿ, ಹೊಸ ಸಂಚಲನ ಮೂಡಿಸುತ್ತಿರುವ ಇವರ ಹೆಸರು ಆರತಿ ನರಗುಂದ, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು, ಎಂಎ ಎಂಎಡ್ ಪದವಿ ಪಡೆದು ಸಾವಿರಾರು ಮಕ್ಕಳಿಗೆ ಪಾಠ ಮಾಡಿ ಅವರ ಭವಿಷ್ಯ ರೂಪಿಸಿದ್ದಾರೆ.
ಸಾಮಾಜಿಕ ಕಳಕಳಿಯನ್ನು ಉಸಿರಾಗಿಸಿಕೊಂಡು ಮುನ್ನಡೆಯುತ್ತಿರುವ ಆರತಿ ನರಗುಂದ ಅವರಿಗೆ ತಮ್ಮ ವಾರ್ಡ್ ನಂಬರ್ 54ರಲ್ಲಿ ಹೆಚ್ಚಿನ ಸಮಾಜ ಸೇವೆ ಮಾಡುವ ಮಹದಾಸೆ. ಶೈಕ್ಷಣಿಕ ವೃತ್ತಿ ಬದುಕಿನಲ್ಲಿ ಬಡ ಮಕ್ಕಳ ಶಿಕ್ಷಣ, ಆರ್ಥಿಕ ದುರ್ಬಲರ ಆರೋಗ್ಯ, ಧಾರ್ಮಿಕ ಸೇವೆಗಾಗಿ ತನು- ಮನ- ಧನ ಸಹಾಯ ಮಾಡುತ್ತಾ ಬಂದಿರುವ ಇವರು, ಅನಾಥ ಮಕ್ಕಳ ಶೈಕ್ಷಣಿಕ ಹಿತಕ್ಕೆ ಶ್ರಮಿಸಿದ್ದಾರೆ. ಪ್ರತಿ ವರ್ಷ ತರಗತಿಯ ನಾಲ್ಕು ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಜೊತೆಗೆ ಪಠ್ಯಪುಸ್ತಕ ನೀಡಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.
ಇನ್ನೂ ಇವರು ಶಿಕ್ಷಣದಲ್ಲಿ ಹೊಸ ಕ್ರಾಂತಿ ಮಾಡುವ ಉದ್ದೇಶದಿಂದ, ದೆಹಲಿಯಲ್ಲಿ ಅಧಿಕಾರ ಪಡೆದು ಉತ್ತಮ ಆಡಳಿತ ನೀಡುತ್ತಿರುವ ಆಮ್ ಆದ್ಮಿ ಪಕ್ಷದ ಆಡಳಿತದ ವೈಖರಿಯನ್ನು ಮೆಚ್ಚಿ ವಾರ್ಡ್ ನಂಬರ್ 54 ರಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಮೂಲಕ ದುರ್ಬಲರ ಧ್ವನಿಯಾಗಿ, ಸೇವೆಗೆ ಸಹಕಾರಿಯಾಗಿ, ಧರ್ಮ ಕಾರ್ಯಗಳ ಬೆಂಬಲಕ್ಕೆ ನಿಂತು, ಸಾಮಾಜಿಕ ನ್ಯಾಯದೊಂದಿಗೆ, ಸರ್ವಜನಾಂಗಗಳು ಒಟ್ಟಾಗಿ ಬದುಕುವ ನಿಟ್ಟಿನಲ್ಲಿ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ವಾರ್ಡ್ ಜನರ ಜೊತೆ ಕೆಲ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಒಪ್ಪಂದಗಳು ಯಾವುವು ಎಂಬುದನ್ನು ಅವರಿಂದಲೇ ಕೇಳಿ.
ಇನ್ನೂ ಎಲ್ಲಾ ರಾಜಕೀಯ ಪಕ್ಷಗಳು ನೀಡುವ ಭರವಸೆಗಿಂತ ಒಂದು ಹೆಜ್ಜೆ ಮುಂದು ಹೋಗಿರುವ ಇವರು, ತಮ್ಮ ವಾರ್ಡ್ ಜನತೆಗೆ ಹೊಸ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಸುಳ್ಳು ಭರವಸೆ ನೀಡುವ ನಾಯಕರ ಮಧ್ಯೆ, ಆರತಿ ನರಗುಂದ ತಮ್ಮ ಒಪ್ಪಂದಗಳ ಮೂಲಕ ಜನರ ನಂಬಿಕೆ ಗಳಿಸಿರುವ ಇವರಿಗೆ ಜನರ ಆರ್ಶೀವಾದ ಸಿಗಬೇಕು ಎನ್ನುವುದು ವಾರ್ಡ್ ಜನರ ಆಶಯವಾಗಿದೆ.
Kshetra Samachara
31/08/2021 08:01 pm