ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜನರ ಸೇವೆ ಅನವರತ ಎನ್ನುವ ಬಿಜೆಪಿ ಸುನೀತಾ

ಹುಬ್ಬಳ್ಳಿ: ಸಮರ್ಥ, ಸ್ವಚ್ಛ ಸುಂದರ ವಾರ್ಡಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ. 27 ನೇ ವಾರ್ಡ್ ದಲ್ಲಿ ಕಮಲದ ಗುರುತಿಗೆ ತಮ್ಮ ಅತ್ಯಮೂಲ್ಯವಾದ ಮತವನ್ನು ನೀಡಿ ಮಾದರಿ ವಾರ್ಡ್ ಅವಕಾಶ ಮಾಡಿ ಕೊಡಿ ಎಂಬುದು ಅಭ್ಯರ್ಥಿಯ ವಿನಂತಿಯಾಗಿದೆ.

ಇದು ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವಾರ್ಡ್ ನಂಬರ್ 27 ರಿಂದ ಭಾರತೀಯ ಜನತಾ ಪಕ್ಷ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುನೀತಾ ಸಂಜೀವಕುಮಾರ ಮಾಳವದಕರ ಮಾಡುತ್ತಿರುವ ಪ್ರಚಾರದ ಕಾರ್ಯ ವೈಖರಿ ವಿಶಿಷ್ಟ. ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿವರೆಗೂ ಮನೆ ಮನೆಗೆ ಭೇಟಿಯಾಗಿ ‌ಪ್ರಚಾರ ನಡೆಸುತ್ತಿದ್ದಾರೆ.

ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿ ಕನಸನ್ನು ಹೊತ್ತು. ಎಲ್ಲ ರಂಗದಲ್ಲಿಯೂ ಮಹಿಳೆಯರು ಸಬಲರು ಎಂಬುವುದನ್ನು ತೋರಿಸುವ ಆಶಾಭಾವನೆ ಹೊಂದಿರುವ ಸುನೀತಾ ಮಾಳವದಕರ, ಸಂಘಟನಾತ್ಮಕ ಕೌಶಲ್ಯ , ಕಷ್ಟಗಳಿಗೆ ಸ್ಪಂದಿಸುವ ಸಹೃದಯತೆ , ಪಕ್ಷ ನಿಷ್ಠೆ, ದಕ್ಷತೆಯನ್ನು ಹೊಂದಿದವದ್ದಾರೆ. ಈ ಗುಣದಿಂದಲೇ ಪಕ್ಷದ ಮುಖಂಡರು ಸುನೀತಾ ಸಂಜೀವ ಮಾಳವದಕರ ಅವರನ್ನು ಗುರುತಿಸಿ ಭಾರತೀಯ ಜನತಾ ಪಕ್ಷದಿಂದ 27 ನೇ ವಾರ್ಡಿನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇವರು ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಅಜೆಂಡಾ ಇವರಿಂದಲೆ ಕೇಳಿ....

ಹತ್ತು ಹಲವಾರು ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಸುನಿತಾ ಮಾಳವದಕರ, ಜನರ ಸೇವೆಗೆ ಅವಕಾಶಕ್ಕೆ ಕಾಯುತ್ತಿದ್ದಾರೆ. ಬಿ.ಎ ಪೊಲಿಟಿಕಲ್ ಸೈನ್ಸ್ ಪದವೀಧರೆಯಾದ ಸುನೀತಾ ಅವರು, ವಿದ್ಯಾರ್ಥಿ ದಿಸೆಯಿಂದಲೇ ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಇವರ ಪತಿ ಸಂಜೀವ ಮಾಳವದಕರ ಕೂಡಾ ಸಂಘದ ಶಿಸ್ತಿನ ಸಿಪಾಯಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಕಳಕಳಿಯನ್ನು ಉಸಿರಾಗಿಸಿಕೊಂಡು ಸಂಕಷ್ಟದ ಜನರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ.

ಸುನೀತಾ ಮಾಳವದಕರ ಬಡ-ಮಧ್ಯಮ ವರ್ಗದವರು, ಅಷ್ಟೇ ಅಲ್ಲದೇ ಮೇಲ್ವರ್ಗದವರು ಸೇರಿ ಎಲ್ಲ ಜನಸಮುದಾಯದ ಕಷ್ಟ ಕಾರ್ಪಣ್ಯಗಳು, ಸಮಸ್ಯೆಗಳನ್ನು ಅರಿತವರಾಗಿದ್ದಾರೆ. ಈ ನಿಟ್ಟಿನಲ್ಲಿ ವಾರ್ಡ್ ಜನರಿಗಾಗಿ ಏನಾದರೂ ಮಾಡಬೇಕೆಂಬ ತುಡಿತ ಹೊಂದಿದ್ದಾರೆ. ಅಭಿವೃದ್ಧಿ ವಿಚಾರ ಬಂದಾಗ ಬಡವರು ಶ್ರೀಮಂತರು ಎಲ್ಲರೂ ಒಂದೇ ಎನ್ನುವ ಸುನೀತಾ, ಸಮಾಜ ಸೇವೆಯಲ್ಲಿ ದೇವರನ್ನು ಕಾಣುವ ಹಂಬಲ ಹೊಂದಿದ್ದಾರೆ. ತಮ್ಮ ವಾರ್ಡ್ ಜನರ ಅಭಿವೃದ್ಧಿ ದೃಷ್ಟಿಯಿಂದ ಇದೀಗ ಎದುರಾಗಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸದಾ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಳ್ಳಲು ತೀರ್ಮಾನಿಸಿದ್ದಾರೆ. ಹಾಗಾಗಿ ವಾರ್ಡ್ ನಂಬರ್ 27 ರಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ವಾರ್ಡ್ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

31/08/2021 07:38 pm

Cinque Terre

53.55 K

Cinque Terre

0

ಸಂಬಂಧಿತ ಸುದ್ದಿ