ಹುಬ್ಬಳ್ಳಿ- ಲೋಕಸಭೆ ಇರಲಿ, ವಿಧಾನಸಭೆ ಇರಲಿ ಕೊನೆಗೆ ಮಹಾನಗರ ಪಾಲಿಕೆ ಚುನವಾಣೆ ಇರಲಿ ನೇರ ಹಣಾಹಣಿ ನಡೆಯುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯೇ. ಗೌಡರ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾದ ಮೇಲೆ ಪ್ರಬಲ ಮೂರನೇ ರಾಜಕೀಯ ಪಕ್ಷ, ಕಾಂಗ್ರೆಸ್ ಹಾಗೂ ಬಿಜೆಪಿಗೆ ಟಕ್ಕರ್ ಕೊಡುವುದು ಕನಸಿನ ಮಾತಾಗಿತ್ತು. ಆದರೆ ಈಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವೂ ಇಲ್ಲಿ ಸದ್ದು ಮಾಡುತ್ತಿದೆ. ಕೇವಲ ಸದ್ದಲ್ಲ ಎರಡೂ ಪಕ್ಷಗಳ ನಿದ್ದೆಗೆಡಿಸಿದೆ ಎಂದು ಹೇಳಬಹುದು.
ಹೌದು..ಹೋರಾಟದ ಮೂಲಕ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿ ಅಧಿಕಾರ ಗದ್ದುಗೆ ಏರಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಆಪ್, ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಣದಲ್ಲಿ ತಮ್ಮದೇ ಛಾಪು ಮೂಡಿಸಿದೆ, ವಿವಿದ ರೀತಿಯ ಹೋರಾಟಗಳ ಮೂಲಕ ಆಪ್, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳನ್ನು ಕಾಲ ಕಾಲಕ್ಕೆ ಜನರ ಮುಂದಿಡುತ್ತ ಬಂದಿದೆ. ನಗರದ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿ ನಿಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ವಿರೋದಿ ಬಣದಲ್ಲಿ ತಳಮಳ ಶುರುವಾಗಿದ್ದಂತೂ ಸತ್ಯ. ಹಣ ಬಲ, ತೋಳ್ಬಲ, ಜಾತಿ ಬಲ ಇದ್ರೆ ಮಾತ್ರ ಚುನಾವಣೆ ಎದುರಿಸಬಹುದು ಎಂಬ ಮಾತನ್ನು ಸುಳ್ಳು ಮಾಡಿದ ಆಪ್ ತನ್ನ ಯಂಗ್ ಎನರ್ಜಿಟಿಕ್ ಟೀಮ್ ರೆಡಿ ಮಾಡಿದೆ ಕಣಕ್ಕಿಳಿದಿದೆ...!
ಆಮ್ ಆದ್ಮಿ ಪಕ್ಷ ನಿರಂತರ ಹೋರಾಟ ಮೂಲಕ ಜನರಿಗೆ ಹತ್ತಿರವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಹುಬ್ಬಳ್ಳಿ ಧಾರವಾಡದ ಹದಗೆಟ್ಟ ರಸ್ತೆ ದುರಸ್ತಿ, ಮಹದಾಯಿ ಹೋರಾಟ, ಕೇಂದ್ರದ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟ, ಹೀಗೆ ಅನೇಕ ಹೋರಾಟ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ.
ಇನ್ನು ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ದಿನ ದಲಿತ ಶೋಷಿತ ವರ್ಗಕ್ಕೆ ಫುಡ್ ಕಿಟ್ ನೀಡಿ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ ಆಪ್ ಕಾರ್ಯಕರ್ತರು. ಇನ್ನು ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಬೇರು ಬಿಟ್ಟಿರುವ ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಿದ್ದ ಮೊದಲ ಪಕ್ಷವಾಗಿ ಹೊರಹೊಮ್ಮಿದ್ದು, ಇವರ ಹೋರಾಟದ ಕಿಚ್ಚು ನೋಡಿದ ಜನರು ಸಹ ಬೆಂಬಲದ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೋರಾಟದ ಮೂಲಕ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಏರಿ ವಿಶ್ವದರ್ಜೆ ನಗರವನ್ನಾಗಿ ಮಾಡುವ ಪಣ ತೊಟ್ಟ ಆಮ್ ಆದ್ಮಿ ಪಕ್ಷದ ಆಡಳಿತ ಧೋರಣೆ ಹುಬ್ಬಳ್ಳಿ ಜನತೆ ಮೆಚ್ಚಿಕೊಂಡಿದೆ. ಇದರಿಂದ ರಾಷ್ಟ್ರೀಯ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾದರೂ ಆಶ್ಚರ್ಯವಿಲ್ಲ.
Kshetra Samachara
31/08/2021 06:53 pm