ಧಾರವಾಡ: ಅಬ್ಬರದ ಪ್ರಚಾರ, ಜನತೆಗೆ ಅಭಿವೃದ್ಧಿ ಕಾರ್ಯದ ಆತ್ಮವಿಶ್ವಾಸ ವಜ್ರದ ಹುಡುಗನಿಗೆ ಗೆಲುವಿನ ಆರತಿ ಬೆಳಗಲಿದ್ದಾರೆ ವಾರ್ಡ್ ನಂಬರ್ 5 ಧಾರವಾಡದ ಜನತೆ.
ಪಕ್ಷೇತರ ಅಭ್ಯರ್ಥಿಯಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ ಸೂರಜ್ ಗೆಲುವಿನ ನಿರೀಕ್ಷೆಯಲ್ಲಿ ಹಗಲಿರುಳೆನ್ನದೆ ಪ್ರಚಾರ ಕೈಗೊಂಡಿದ್ದು, ಜನ ಅಷ್ಟೇ ಅತ್ಯುತ್ತಮ ಬೆಂಬಲವನ್ನು ವಜ್ರದ ಹುಡುಗನಿಗೆ ನೀಡುತ್ತಿದ್ದಾರೆ.
ಉತ್ತಮ ಸ್ನೇಹಿತರ ಬಳಗ ಜೊತೆ ಪ್ರಚಾರಕ್ಕಿಳಿದ ಸೂರಜ್ ವೃದ್ಧರು, ಮಹಿಳೆಯರು, ಅಂಗವಿಕಲರ ಸಬಲೀಕರಣದ ಆಸೆ ಹೊತ್ತು ಪ್ರತಿಯೊಬ್ಬರ ಆರ್ಶಿವಾದಕ್ಕಾಗಿ ಅವರ ಪಾದಗಳಿಗೆ ಹಣೆ ಒತ್ತಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ.
ವಿಜಯ ಲಕ್ಷ್ಮೀ ಮಾಲೆ ಧರಿಸಲು ಅಪ್ಪಟ ವಜ್ರದದಂತಹ ಮಹತ್ವಾಕಾಂಕ್ಷೇಗಳ ಸರಮಾಲೆ ಹೊತ್ತು ವಾರ್ಡ್ 5ರ ಸಂಪೂರ್ಣ ಪ್ರದಕ್ಷಿಣೆ ಮುಂದಾದ ಸೂರಜ್ ಜನ ನಿಷ್ಠನಾಗಿ, ಅಭಿವೃದ್ಧಿಯಲ್ಲಿ ಶ್ರೇಷ್ಠನಾಗಿ, ಸೇವೆ ಮಾಡುವ ತಾತ್ಪರ್ಯಕ್ಕೆ ಈ ಬಾರಿಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಕಣದಲ್ಲಿ ಜನರ ಶ್ರೀರಕ್ಷೆ ಕಾಯುತ್ತಿದ್ದು ಅರೆ ಗಳಿಗೆ ಸಹ ಕೈ ಬಿಡದೆ ಪ್ರಚಾರದಲ್ಲಿ ಮುಳುಗಿ ಜನಸೇವೆಗೆ ಸಜ್ಜಾಗಿದ್ದಾರೆ.
Kshetra Samachara
31/08/2021 12:53 pm