ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಧ್ಯ- ಜೋಶಿ

ಹುಬ್ಬಳ್ಳಿ- ಅಭಿವೃದ್ಧಿ ಹಾಗೂ ಜನಪರ ಆಡಳಿತದ ಪರಿಕಲ್ಪನೆಯೊಂದಿಗೆ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಎದುರಿಸುತ್ತೇವೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನಗರದ ನಗರದಲ್ಲಿಂದು ಮಾತನಾಡಿದ ಅವರು, ನಗರಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಂಥ ಮಹತ್ವದ ಕೊಡುಗೆಯನ್ನು ನಮ್ಮ ಸರಕಾರ ನೀಡಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದರು.

70 ವರ್ಷ ದೇಶ ಅಳಿದ ಕಾಂಗ್ರೆಸ್ ನವರು ನಿನ್ನೆ ಮಾತಾಡಿದ್ದಾರೆ. ಇವರಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ಮಾಡೋಕೆ ಆಗಲಿಲ್ಲ. ಜಗದೀಶ್ ಶೆಟ್ಟರ್ ಮಾಡಿದ್ದ ಪ್ರಾಜೆಕ್ಟ್ ನ್ನ ಅವರು ರಿಜೆಕ್ಟ್ ಮಾಡಿದರು. ನಮ್ಮ ಸರ್ಕಾರ ಬಂದಮೇಲೆ ಎಲ್ ಆ್ಯಂಡ್ ಟಿ ಗೆ ಕುಡಿಯುವ ನೀರಿನ ಯೋಜನೆ ನೀಡಿದ್ದೇವೆ ಎಂದರು.

ಇನ್ನು ಐಐಟಿ ಬಗ್ಗೆ ನಿನ್ನೆ ಮಾತನಾಡುವ ಕಾಂಗ್ರೆಸ್ ಸಿದ್ದರಾಮಯ್ಯ ನವರೆ ಇಲ್ಲಿ ಐಐಟಿ ಬರಬಾರದು ಅಂತ ಪತ್ರ ಬರೆದ ಮಹಾಪುರುಷರು ಆಗಿದ್ದಾರೆ. ಜನ ಯಾವಾಗ ಉತ್ತರ ಕೊಡಬೇಕು ಅವಾಗ ಉತ್ತರ ಕೊಡ್ತಾರೆ‌. ಕೈಗಾರಿಕೆಗಾಗಿ ಶೆಟ್ಟರ್ 5300 ಕೋಟಿ ರೂ ಏಕಸ್ ಕಂಪನಿಗೆ ಕೊಟ್ಟಿದ್ದಾರೆ. ಧಾರವಾಡ ಶಿಕ್ಷಣ ಕಾಶಿ ಹಿನ್ನೆಲೆ

13.50 ಕೋಟಿ ವೆಚ್ಚದಲ್ಲಿ ಹೊಸ ಹಾಸ್ಟೆಲ್ ಸಿದ್ಧವಾಗುತ್ತಿದೆ ಎಂದರು.

ಇನ್ನು ಹು-ಧಾ ಮಹಾನಗರ ಗುಂಡಿಗಳ ರಸ್ತೆ ಎಂಬ ಡಿಕೆಶಿ ರಸ್ತೆಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ರಸ್ತೆ ಕಾಮಗಾರಿ ಆರಂಭ ಮಾಡುತ್ತೇವೆ. ಬಿಆರ್ ಟಿಎಸ್ ಒಂದೊಂದು ಕಡೆ ಸಮಸ್ಯೆ ಆಗಿದೆ‌. ಅದು ಫೆಲ್ಯುವರ್ ಅಂತ ಏನಿಲ್ಲ ಒಂದಿಷ್ಟು ಕಡೆ ಸಮಸ್ಯೆ ಆಗಿದ್ದನ್ನ ಗಮನ ತಂದಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಮಾಡಿದ ಕಾಮಗಾರಿಯಿಂದ ಸಮಸ್ಯೆ ಆಗಿದೆ ಎಂದರು.

ಸಿಎಂ ಬದಲಾವಣೆ ವಿಚಾರವಾಗಿ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಲ್ಲಿ ಡಿಕೆಶಿ ಭ್ರಷ್ಟಾಚಾರದ ಬಗ್ಗೆ ಮತನಾಡೋದು ಭೂತದ ಬಾಯಲ್ಲಿ ಭಾಗವತ್ ಗೀತೆ ಬಂದ ಹಾಗೆ ಎಂದು ವ್ಯಂಗ್ಯವಾಡಿದರು.

Edited By : Nagesh Gaonkar
Kshetra Samachara

Kshetra Samachara

29/08/2021 03:08 pm

Cinque Terre

42.91 K

Cinque Terre

24

ಸಂಬಂಧಿತ ಸುದ್ದಿ